ಹೋಶೇಯ 10:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು. ಅಧ್ಯಾಯವನ್ನು ನೋಡಿ |