ಹೋಶೇಯ 1:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯೆಹೋವನು ಅವನನ್ನು ಕುರಿತು, “ಈ ಮಗುವಿಗೆ ಇಜ್ರೇಲ್ ಎಂಬ ಹೆಸರಿಡು; ಇಜ್ರೇಲಿನಲ್ಲಿ ಸುರಿಸಿದ ರಕ್ತಕ್ಕೆ ಪ್ರತಿಯಾಗಿ ಸ್ವಲ್ಪ ಕಾಲದೊಳಗೆ ನಾನು ಯೇಹು ವಂಶದವರಿಗೆ ಮುಯ್ಯಿ ತೀರಿಸಿ ಇಸ್ರಾಯೇಲ್ ಜನಾಂಗವನ್ನು ನಿರ್ನಾಮ ಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆಗ ಸರ್ವೇಶ್ವರ, ಹೊಶೇಯನಿಗೆ, “ಈ ಮಗುವಿಗೆ ಜೆಸ್ರೀಲ್ ಎಂದು ಹೆಸರಿಡು. ಏಕೆಂದರೆ, ಇಸ್ರಯೇಲ್‍ನಲ್ಲಿ ಹರಿಸಿದ ರಕ್ತಪಾತಕ್ಕೆ ಪ್ರತಿಯಾಗಿ ಸ್ವಲ್ಪಕಾಲದಲ್ಲೆ ಯೇಹುವಿನ ಮನೆತನವನ್ನು ದಂಡಿಸುವೆನು; ಇಸ್ರಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯೆಹೋವನು ಅವನನ್ನು ಕುರಿತು - ಈ ಮಗುವಿಗೆ ಇಜ್ರೇಲ್ ಎಂಬ ಹೆಸರಿಡು; ಇಜ್ರೇಲಿನಲ್ಲಿ ಸುರಿಸಿದ ರಕ್ತಕ್ಕೆ ಪ್ರತಿಯಾಗಿ ಸ್ವಲ್ಪ ಕಾಲದೊಳಗೆ ನಾನು ಯೇಹುವಂಶದವರಿಗೆ ಮುಯ್ಯಿತೀರಿಸಿ ಇಸ್ರಾಯೇಲ್‍ಜನಾಂಗವನ್ನು ನಿರ್ನಾಮಮಾಡುವೆನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಹೋಶೇಯನಿಗೆ ಯೆಹೋವನು ಹೇಳಿದ್ದೇನೆಂದರೆ, “ಅವನಿಗೆ ಇಜ್ರೇಲ್ ಎಂದು ಹೆಸರನ್ನಿಡು. ಯಾಕೆಂದರೆ, ಇನ್ನು ಸ್ವಲ್ಪ ಸಮಯದಲ್ಲಿ ನಾನು ಯೇಹುವಿನ ಸಂತತಿಯವರನ್ನು ಶಿಕ್ಷಿಸುವೆನು. ಅವನು ಇಜ್ರೇಲ್ ತಗ್ಗಿನಲ್ಲಿ ರಕ್ತವನ್ನು ಸುರಿಸಿರುತ್ತಾನಲ್ಲಾ? ಆ ಮೇಲೆ ನಾನು ಇಸ್ರೇಲ್ ರಾಜ್ಯಕ್ಕೆ ಅಂತ್ಯವನ್ನು ತರುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆಗ ಯೆಹೋವ ದೇವರು ಹೋಶೇಯನಿಗೆ, “ಈ ಮಗುವಿಗೆ ಇಜ್ರೆಯೇಲ್ ಎಂದು ಹೆಸರಿಡು. ಏಕೆಂದರೆ ಶೀಘ್ರದಲ್ಲಿಯೇ ನಾನು ಇಜ್ರೆಯೇಲ್ ಕಣಿವೆಯಲ್ಲಿ ರಕ್ತವನ್ನು ಸುರಿಸಿದ ಯೇಹುವಿನ ಮನೆತನದವರ ಮೇಲೆ ಮುಯ್ಯಿತೀರಿಸಿಕೊಳ್ಳುವೆನು. ಇಸ್ರಾಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು. ಅಧ್ಯಾಯವನ್ನು ನೋಡಿ |