ವಿಮೋಚನಕಾಂಡ 38:25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ದೇವರ ಸೇವೆಗೆಂದು ಸಂಗ್ರಹಿಸಿದ ಬೆಳ್ಳಿಯ ತೂಕವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ನೂರು ತಲಾಂತು ಹಾಗು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25-26 ಬೆಳ್ಳಿಯ ತೂಕ ಸುಮಾರು 3,430 ಕಿಲೋಗ್ರಾಂ ಇತ್ತು. ಇದು ಜನಗಣತಿಯಲ್ಲಿ ಸೇರಿಸಲಾಗಿದ್ದ ಇಪ್ಪತ್ತು ವರ್ಷದವರು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಕೊಟ್ಟ ಮೊತ್ತ. ಆರುಲಕ್ಷ, ಮೂರು ಸಾವಿರದ ಐನೂರ ಐವತ್ತು ಮಂದಿಯನ್ನು ಜನಗಣತಿಯಲ್ಲಿ ಹೀಗೆ ಸೇರಿಸಲಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25-26 ಬೆಳ್ಳಿಯ ಲೆಕ್ಕ ಲೆಕ್ಕಿಸಲ್ಪಟ್ಟವರಲ್ಲಿ, ಇಪ್ಪತ್ತು ವರುಷದವರೂ ಹೆಚ್ಚಿನ ವಯಸ್ಸುಳ್ಳವರೂ ದೇವರ ಸೇವೆಗೆ ನೇಮಕವಾದ ರೂಪಾಯಿಯ ಮೇರೆಗೆ ಒಂದೊಂದು ಬೆಕಾ ಅಂದರೆ ಅರ್ಧ ಅರ್ಧ ರೂಪಾಯಿ ಕಪ್ಪವನ್ನು ಕೊಡಬೇಕಾದದರಿಂದ ಸಮೂಹದಲ್ಲಿ ಲೆಕ್ಕಿಸಲ್ಪಟ್ಟ ಆರು ಲಕ್ಷ ಮೂರು ಸಾವಿರದ ಐನೂರ ಐವತ್ತು ಮಂದಿಯಿಂದ ವಸೂಲಾದದ್ದು - ನೂರು ತಲಾಂತು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಲೆಕ್ಕಿಸಲ್ಪಟ್ಟ ಒಟ್ಟು ಗಂಡಸರು ಮೂರುಮುಕ್ಕಾಲು ಟನ್‌ಗಿಂತ ಹೆಚ್ಚು ಬೆಳ್ಳಿಯನ್ನು ಕೊಟ್ಟರು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಯಿತು.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಪರಿಶುದ್ಧಾಲಯದ ನಿಯಮದ ಮೇರೆಗೆ ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ಸಂಗ್ರಹಿದ ಬೆಳ್ಳಿಯ ತೂಕವು ಸುಮಾರು 3,400 ಕಿಲೋಗ್ರಾಂ ಇತ್ತು. ಅಧ್ಯಾಯವನ್ನು ನೋಡಿ |