ವಿಮೋಚನಕಾಂಡ 29:37 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಹೀಗೆ ಏಳು ದಿನಗಳವರೆಗೂ ಯಜ್ಞವೇದಿಯ ನಿಮಿತ್ತವಾಗಿ ದೋಷಪರಿಹಾರಕ ಆಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಬೇಕು. ಯಜ್ಞವೇದಿಯು ಅತಿ ಪರಿಶುದ್ಧವಾಗಿರಬೇಕು. ಯಜ್ಞವೇದಿಯನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)37 ಹೀಗೆ ಏಳು ದಿನಗಳವರೆಗೆ ಬಲಿಪೀಠದ ನಿಮಿತ್ತ ಪಾಪಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪ್ರತಿಷ್ಠಾಪಿಸು. ಬಲಿಪೀಠವು ಅತಿಶುದ್ಧವಾಗಿರಬೇಕು. ಅದನ್ನು ಸೋಕಿದ್ದೆಲ್ಲವು ಪರಿಶುದ್ಧವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ಹೀಗೆ ಏಳು ದಿನಗಳವರೆಗೂ ಯಜ್ಞವೇದಿಯ ನಿವಿುತ್ತವಾಗಿ ದೋಷಪರಿಹಾರಕಾಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಬೇಕು. ಯಜ್ಞವೇದಿಯು ಅತಿಪರಿಶುದ್ಧವಾಗಿರಬೇಕು; ಯಜ್ಞವೇದಿಗೆ ಸೋಂಕಿದ್ದೆಲ್ಲವು ಪರಿಶುದ್ಧವಾಗಿರಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಹೀಗೆ ಏಳು ದಿನಗಳವರೆಗೆ ಯಜ್ಞವೇದಿಕೆಯನ್ನು ಶುದ್ಧಗೊಳಿಸಿ ಪವಿತ್ರಗೊಳಿಸಬೇಕು. ಆ ಸಮಯದಲ್ಲಿ ಯಜ್ಞವೇದಿಕೆಯು ಮಹಾಪವಿತ್ರವಾಗಿರುವುದು. ಯಜ್ಞವೇದಿಕೆಗೆ ಸೋಂಕಿದ ವಸ್ತುಗಳೆಲ್ಲವೂ ಪವಿತ್ರವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಏಳು ದಿವಸ ಬಲಿಪೀಠಕ್ಕೊಸ್ಕರ ಪ್ರಾಯಶ್ಚಿತ್ತ ಮಾಡಿ, ಅದನ್ನು ಪವಿತ್ರ ಮಾಡಬೇಕು. ಆಗ ಬಲಿಪೀಠವು ಅತಿ ಪರಿಶುದ್ಧವಾಗಿರುವುದು. ಬಲಿಪೀಠವನ್ನು ಮುಟ್ಟುವುದೆಲ್ಲಾ ಪವಿತ್ರವಾಗಿರಬೇಕು. ಅಧ್ಯಾಯವನ್ನು ನೋಡಿ |
ಅಧರ್ಮವನ್ನು ಕೊನೆಗಾಣಿಸುವುದು, ಪಾಪಗಳನ್ನು ತೀರಿಸುವುದು, ಅಪರಾಧವನ್ನು ನಿವಾರಿಸುವುದು, ಸನಾತನ ಧರ್ಮವನ್ನು ಸ್ಥಾಪಿಸುವುದು, ಕನಸನ್ನೂ ಮತ್ತು ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವುದಕ್ಕೆ, ಅತಿಪರಿಶುದ್ಧವಾದದ್ದನ್ನು ಅಭಿಷೇಕಿಸುವುದು, ಇವೆಲ್ಲಾ ನೆರವೇರುವುದಕ್ಕೆ ಮೊದಲು ನಿನ್ನ ಜನಕ್ಕೂ, ನಿನ್ನ ಪರಿಶುದ್ಧ ಪುರಕ್ಕೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.
ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ ಇಲ್ಲವೆ ಗುಗ್ಗರಿಯನ್ನಾಗಲಿ ಅಥವಾ ದ್ರಾಕ್ಷಾರಸವನ್ನಾಗಲಿ ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರ ಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವುದೋ? ಎಂದು ಧರ್ಮವಿಧಿಯನ್ನು ವಿಚಾರಿಸು” ಪ್ರವಾದಿಯು ಹಾಗೆ ವಿಚಾರಿಸಲು ಯಾಜಕರು “ಇಲ್ಲ” ಎಂದು ಉತ್ತರಕೊಟ್ಟರು.