ವಿಮೋಚನಕಾಂಡ 28:39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ಆರೋನನು ಧರಿಸಬೇಕಾದ ಒಳ ಅಂಗಿಯನ್ನು ಹತ್ತಿಯ ನೂಲಿನಿಂದ ಕಸೂತಿ ಹಾಕಿಸಿ ನೇಯಿಸಬೇಕು. ಅವನ ಮುಂಡಾಸವನ್ನು ಹತ್ತಿಯ ನೂಲಿನಿಂದ ಮಾಡಿಸಬೇಕು. ಅವನ ನಡುಕಟ್ಟನ್ನು ಕಸೂತಿ ಕೆಲಸದಿಂದ ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 “ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಯವಾದ ನಾರಿನಿಂದ ನೇಯಿಸು. ಅವನ ಪೇಟವನ್ನೂ ಅಂತೆಯೇ ನಯವಾದ ನಾರಿನಿಂದ ಮಾಡಿಸು. ಅವನ ನಡುಕಟ್ಟು ಕಸೂತಿ ಕೆಲಸದಿಂದ ಅಲಂಕಾರವಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಾರಿನಿಂದ ವಿಚಿತ್ರವಾಗಿ ನೇಯಿಸಬೇಕು; ಅವನ ಮುಂಡಾಸವನ್ನು ನಾರಿನಿಂದ ಮಾಡಿಸಬೇಕು; ಅವನ ನಡುಕಟ್ಟನ್ನು ಬುಟೇದಾರಿ ಕೆಲಸದಿಂದ ಮಾಡಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್39 “ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಟವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ39 “ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸದಿಂದ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿಸಬೇಕು. ಅಧ್ಯಾಯವನ್ನು ನೋಡಿ |