Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 28:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಮತ್ತು ಹೆಣಿಗೆ ಕೆಲಸದಿಂದ ಹುರಿಗಳಂತಿರುವ ಎರಡು ಚೊಕ್ಕ ಬಂಗಾರದ ಸರಪಣಿಗಳನ್ನು ಮಾಡಿಸಿ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅಲ್ಲದೇ ಹೆಣೆಗೇ ಕೆಲಸದಿಂದ ಹುರಿಗಳಂತಿರುವ ಎರಡು ಅಪ್ಪಟ ಬಂಗಾರದ ಸರಪಣಿಗಳನ್ನು ಮಾಡಿಸಿ ಆ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅದಲ್ಲದೆ ಹೆಣಿಗೆ ಕೆಲಸದಿಂದ ಹುರಿಗಳಂತಿರುವ ಎರಡು ಚೊಕ್ಕಬಂಗಾರದ ಸರಪಣಿಗಳನ್ನು ಮಾಡಿಸಿ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಹೊಸೆದ ಹಗ್ಗದಂತೆ ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೆ ಕೆಲಸದಿಂದ ಮಾಡಿ, ಆ ಹೆಣೆದ ಸರಪಣಿಗಳ ಕೊನೆಗಳನ್ನು ಜವೆಗಳಿಗೆ ಸೇರಿಸಿಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 28:14
9 ತಿಳಿವುಗಳ ಹೋಲಿಕೆ  

ಪ್ರತಿಯೊಂದು ಕಂಬವು ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ತಾಮ್ರದ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ತಾಮ್ರದ ಜಾಲರಿಯೂ ದಾಳಿಂಬೆ ಹಣ್ಣುಗಳೂ ಇದ್ದವು.


ಒಂದೊಂದಕ್ಕೆ ಏಳೇಳರಂತೆ ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ತಾಮ್ರದ ಸರಿಗೆಯ ಜಾಲರಿಗಳನ್ನೂ ಮಾಡಿದನು.


ಎದೆಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ನೇಯ್ಗೆಯ ಕೆಲಸದಿಂದ ಮಾಡಿದರು.


ಮುದ್ರೆಗಳನ್ನು ಕೆತ್ತುವ ಹಾಗೆ ಆ ಶಿಲ್ಪಿಗರಿಂದ ಎರಡೂ ರತ್ನಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ, ಅದಕ್ಕೆ ಚಿನ್ನವನ್ನು ಆ ಮುದ್ರೆಗಳ ಮೇಲೆ ಇರಿಸಬೇಕು.


ಆ ರತ್ನಗಳನ್ನು ಜೋಡಿಸುವುದಕ್ಕೆ ಚಿನ್ನದ ಸರಿಗೆಯನ್ನು ಹೆಣೆದು ಗೂಡುಗಳನ್ನು ಮಾಡಿಸಬೇಕು.


ನ್ಯಾಯತೀರ್ಪಿನ ಎದೆಯ ಪದಕದ ಕವಚವನ್ನು ಕಸೂತಿ ಕೆಲಸದಿಂದ ಮಾಡಿಸಬೇಕು. ಅದನ್ನು ಏಫೋದ್ ಅನ್ನು ಮಾಡಿಸಿದ ಹಾಗೆಯೇ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು