ವಿಮೋಚನಕಾಂಡ 22:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲ ಎಂಬುದನ್ನು ದೃಢಪಡಿಸುವುದಕ್ಕಾಗಿ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಆಗ ಪಶುವಿನ ಒಡೆಯನು ಆ ಪ್ರಮಾಣವಾಕ್ಯವನ್ನು ನಂಬಬೇಕು. ಪ್ರಮಾಣಮಾಡಿದವನು ಅದಕ್ಕೆ ಈಡುಕೊಡಬೇಕಾದ ಅಗತ್ಯವಿರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಆ ವ್ಯಕ್ತಿ ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲವೆಂಬುದನ್ನು ದೃಢಪಡಿಸಲು ಸರ್ವೇಶ್ವರನ ಮೇಲೆ ಪ್ರಮಾಣ ಮಾಡಬೇಕು. ಪ್ರಾಣಿಯ ಒಡೆಯನು ಆ ಪ್ರಮಾಣ ವಾಕ್ಯವನ್ನು ನಂಬಬೇಕು. ಪ್ರಮಾಣ ಮಾಡುವವನು ಈಡು ಕೊಡಬೇಕಾದ ಅಗತ್ಯವಿರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸ ಮಾಡಲಿಲ್ಲವೆಂಬದನ್ನು ದೃಢಪಡಿಸುವದಕ್ಕೆ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಪಶುವಿನ ಒಡೆಯನು ಆ ಪ್ರಮಾಣ ವಾಕ್ಯವನ್ನು ನಂಬಬೇಕು; ಪ್ರಮಾಣ ಮಾಡಿದವನು ಈಡುಕೊಡಬೇಕಾದ ಅಗತ್ಯವಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಯೆಹೋವ ದೇವರ ಮುಂದೆ ಪ್ರಮಾಣಮಾಡಬೇಕು. ಅದನ್ನು ಪಶುವಿನ ಯಜಮಾನನು ಒಪ್ಪಿದರೆ ಅವನು ಈಡುಕೊಡಬಾರದು. ಅಧ್ಯಾಯವನ್ನು ನೋಡಿ |