ಲೂಕ 8:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ; ಇವರೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಖರೆ ತೆಂಚ್ಯಾ ಯವ್ಜನ್ಯಾ ಅನಿ ಪಯ್ಸ್ಯಾಂಚಿ ಆಶಾ, ಅನಿ ಹ್ಯಾ ಜಿವನಾಚ್ಯಾ ಯವ್ಜನ್ಯಾ, ತ್ಯಾ ಗೊಸ್ಟಿಯಾಕ್ನಿ ದಡ್ಪುನ್ ಧರ್‍ತ್ಯಾತ್, ಅನಿ ತೆಂಕಾ ಫಳ್ ದಿವ್ಕ್ ದಿನ್ಯಾತ್. ಅಧ್ಯಾಯವನ್ನು ನೋಡಿ |