ಲೂಕ 20:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಆದರೆ ಗೇಣಿದಾರರು ಯಜಮಾನನ ಮಗನನ್ನು ಕಂಡದ್ದೇ ತಡ, ‘ತೋಟಕ್ಕೆ ಇವನೇ ಉತ್ತರಾಧಿಕಾರಿ. ಇವನನ್ನು ಮುಗಿಸಿಬಿಡೋಣ; ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆದರೆ [ಕಳುಹಿಸಿದಾಗ] ಆ ಒಕ್ಕಲಿಗರು ಅವನನ್ನು ಕಂಡು - ಇವನೇ ಬಾಧ್ಯಸ್ಥನು; ಇವನನ್ನು ಕೊಂದುಹಾಕೋಣ, ಇವನ ಸ್ವಾಸ್ತ್ಯ ನಮ್ಮದಾಗಲಿ ಎಂದು ಒಬ್ಬರಸಂಗಡಲೊಬ್ಬರು ಮಾತಾಡಿಕೊಂಡು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಖರೆ, ತ್ಯಾ ಲೆಕಾಕ್ ಬಗಟಲ್ಲೆಚ್ ತೆ ಗುತ್ಕ್ಯಾಚೆ ಎಕಾಮೆಕಾಕ್ನಿ “ಹ್ಯೊ ಹ್ಯಾ ಮಳ್ಯಾಚ್ಯಾ ಮಾಲ್ಕಾಚೊ ಲೆಕ್, ಯೆವಾ ಹೆಕಾ ಜಿವಾನಿಚ್ ಮಾರುಂವ್ವಾ, ಅನಿ ಮಾನಾ ಹಿ ಸಗ್ಳಿ ಅಸ್ತಿ ಅಮ್ಕಾಚ್ ಹೊತಾ” ಮನುಕ್‍ಲಾಲೆ. ಅಧ್ಯಾಯವನ್ನು ನೋಡಿ |