ರೋಮಾಪುರದವರಿಗೆ 9:33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಧರ್ಮಶಾಸ್ತ್ರದಲ್ಲಿ ಹೀಗೆ ಬರೆಯಲ್ಪಟ್ಟಿದೆ, “ಇಗೋ ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂಬುದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಪವಿತ್ರಗ್ರಂಥದಲ್ಲಿ ಹೀಗೆಂದು ಲಿಖಿತವಾಗಿದೆ: “ಇಗೋ, ಎಡವಿ ನೆಲಕ್ಕುರುಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸಿ ಬೀಳುವಂತೆ ಮಾಡುವ ಬಂಡೆಯನ್ನೂ ನಾನು ಸಿಯೋನಿನಲ್ಲಿ ಇರಿಸುವೆನು; ಆತನಲ್ಲಿ ವಿಶ್ವಾಸವಿಡುವವನಾದರೋ ಎಂದಿಗೂ ಆಶಾಭಂಗಗೊಳ್ಳನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಇಗೋ, ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದಿಲ್ಲವೆಂತಲೂ ಶಾಸ್ತ್ರದಲ್ಲಿ ಬರೆದದೆಯಲ್ಲಾ. ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ: “ಇಗೋ, ನಾನು ಸಿಯೋನಿನಲ್ಲಿ ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ. ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ. ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್33 ತೆಚೆಸಾಟ್ನಿ ಪವಿತ್ರ್ ಪುಸ್ತಕ್ ಮನ್ತಾ; “ಅಬಗ್, ಸಿಯೊನಾತ್ ಮಿಯಾ ಎಕ್ ಗುಂಡೊ ಥವ್ತಾ, ತೊ ಲೊಕಾಕ್ನಿ ಅಟ್ಕಳಿ ಸರ್ಕೆ ಕರ್‍ತಾ, ತೆಂಕಾ ಪಾಡ್ವುತಲೊ ಮೊಟೊ ಗುಂಡೊ ತೊ. ಖರೆ ತೆಚ್ಯಾ ವರ್‍ತಿ ವಿಶ್ವಾಸ್ ಕರ್‍ತಾ ತೆನಿ ನಿರಾಸ್ ಹೊಯ್‍ನ್ಯಾತ್”. ಅಧ್ಯಾಯವನ್ನು ನೋಡಿ |