Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆದರೆ ಕೆಲವು ಕೊಂಬೆಗಳನ್ನು ಮುರಿದುಹಾಕಿ ಕಾಡೆಣ್ಣೆ ಮರದಂತಿರುವ ನಿನ್ನನ್ನು ಅವುಗಳ ಜಾಗದಲ್ಲಿ ಕಸಿಮಾಡಿರಲಾಗಿ ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಅದು ಪಾಲುಹೊಂದಿದ್ದರೂ ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಅಂಟಿಸಿದ ಮೇಲೆ ನೀನು ಕೊಂಬೆಯ ಕುರಿತು ಹೆಚ್ಚಿಸಿಕೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಈಗ ಉತ್ತಮ ತಳಿಯ ಓಲಿವ್ ಮರದಿಂದ ಕೆಲವು ರೆಂಬೆಗಳನ್ನು ಕಡಿದುಹಾಕಿ ಆ ತಾವಿನಲ್ಲಿ ಕಾಡು ಓಲಿವ್ ಮರದ ರೆಂಬೆಯನ್ನು ಕಸಿಮಾಡಲಾಗಿದೆ. ಅನ್ಯಜನಾದ ನೀನು ಆ ಕಾಡುಮರದ ರೆಂಬೆಯಂತಿರುವೆ; ಕಸಿಮಾಡಿರುವುದರಿಂದ ರಸವತ್ತಾದ ಆ ಬೇರಿನಿಂದ ಈಗ ಪೋಷಣೆ ಪಡೆಯುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದರೆ ಕೆಲವು ಕೊಂಬೆಗಳು ಮುರಿದುಹಾಕಲ್ಪಡಲು ಕಾಡೆಣ್ಣೇಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದರೂ ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಕೆಲವು ಕೊಂಬೆಗಳು ಮುರಿದುಹೋಗಿರುವುದಾದರೆ, ಕಾಡು ಓಲಿವ್ ಮರದಂತಿರುವ ನೀನು ಅವುಗಳ ನಡುವೆ ಕಸಿಮಾಡಿ ಉತ್ತಮ ಓಲಿವ್ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರಲಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಉಲ್ಲ್ಯಾ ಬರ್‍ಯಾ ಒಲಿವಾಚ್ಯಾ ಝಾಡಾಂಚ್ಯಾ ಟಾಳಿಯಾ ತೊಡುನ್ ಕಾಡುನ್ ಹೊತ್ಯಾತ್, ಅನಿ ಎಕ್ ಜಂಗ್ಲಿ ಒಲಿವ್ ಝಾಡಾಚಿ ಟಾಳಿ ತೆಕಾ ಲಾವುನ್ ಕಶಿ ಕರುನ್ ಹೊತಾ. ತುಮಿ ಜುದೆವ್ ನ್ಹಯ್ ಹೊತ್ತಿ ಲೊಕಾ ತ್ಯಾ ಕಶಿ ಕರಲ್ಲ್ಯಾ ಝಾಡಾಂಚ್ಯಾ ಸರ್ಕೆ, ಹಾಸಿ, ಅನಿ ತುಮಿ ಜುದೆವಾಂಚ್ಯಾ ಘಟ್ಮುಟ್ ಆತ್ಮಿಕ್ ರಿತಿಚ್ಯಾ ಜಿವನಾಚೊ ವಾಟೊ ಘೆವ್ನ್ ಹಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:17
22 ತಿಳಿವುಗಳ ಹೋಲಿಕೆ  

ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ದೇವಜನರೊಂದಿಗೆ ಸಹಬಾಧ್ಯರೂ ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.


ಯೆಹೋವನು ನಿನಗೆ ಸುಂದರವಾದ ಫಲದಿಂದ ಕೂಡಿದ ಹಸಿರಾದ ಒಲೀವ್ ಮರವೆಂದು ಹೆಸರಿಟ್ಟಿದ್ದನು. ಆದರೆ ಅವನು ಆ ಮರಕ್ಕೆ ಬೆಂಕಿ ಹಚ್ಚಿ ಬಲು ಧಗಧಗಿಸುವಂತೆ ಮಾಡಿದ್ದಾನೆ; ಅದರ ರೆಂಬೆಗಳು ಮುರಿದುಹೋಗಿವೆ.


ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ.


ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.


ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.


ಅಪರಾಧಗಳನ್ನು ಮಾಡುವುದರಿಂದಲೂ ಹಾಗೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ ಮತ್ತು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ.


ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು.


ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿದುಹೋಗುವವು, ಹೆಂಗಸರು ಬಂದು ಅವುಗಳಿಗೆ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಆ ಪ್ರಜೆಯು ಬುದ್ಧಿಹೀನವಾದವರೇ. ಆದಕಾರಣ ಸೃಷ್ಟಿಸಿದಾತನು ಅವರಿಗೆ ಕರುಣೆ ತೋರಿಸುವುದಿಲ್ಲ, ನಿರ್ಮಿಸಿದಾತನು ಅವರಿಗೆ ದಯೆತೋರಿಸುವುದಿಲ್ಲ.


ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ.


ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ.


ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಮತ್ತು ಎರಡು ಮರಗಳು ಅದರ ಪಕ್ಕಗಳಲ್ಲಿ ಇದೆ” ಎಂದು ಹೇಳಿದೆನು.


ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳವಾಗಿ ಭಯಪಟ್ಟು, ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.


ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ, ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು.


ಆ ದೇಶದಲ್ಲಿ ಗೋದಿ, ಜವೆಗೋದಿ, ದ್ರಾಕ್ಷಿ, ಅಂಜೂರ, ದಾಳಿಂಬ ಇವುಗಳು ಬೆಳೆಯುತ್ತವೆ; ಎಣ್ಣೆ ಮರಗಳೂ ಮತ್ತು ಜೇನೂ ಸಿಕ್ಕುತ್ತವೆ.


ನಾವಂತೂ ಜನ್ಮತ ಯೆಹೂದ್ಯರು “ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ.”


“ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು.


ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವುದು ಎಷ್ಟೋ ಯುಕ್ತವಾಗಿದೆಯಲ್ಲವೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು