Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಹಾಗಾದರೆ “ಅವರು ಬಿದ್ದೇಹೋಗುವಂತೆ ಎಡವಿದರೇನು” ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಆಗಬಾರದು ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಅಸೂಯೆ ಹುಟ್ಟಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಹಾಗಾದರೆ ಇಸ್ರಯೇಲರು ಮೇಲೇಳದಂತೆ ಮುಗ್ಗರಿಸಿಬಿದ್ದರು ಎಂದು ಹೇಳೋಣವೆ? ಎಂದಿಗೂ ಇಲ್ಲ. ಅವರ ಅಪರಾಧದ ನಿಮಿತ್ತ ಇತರರಿಗೆ ಉದ್ಧಾರ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆ ಪಡುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹಾಗಾದರೆ ಅವರು ಬಿದ್ದೇ ಹೋಗುವಂತೆ ಎಡವಿದರೇನು ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಹುರುಡು ಹುಟ್ಟಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತಸೆ ಜಾಲ್ಯಾರ್ ಮಿಯಾ ಇಚಾರ್ತಾ: ಜುದೆವ್ ಲೊಕಾ ಅಟ್ಕಳುನ್ ಪಡ್ಲಿ ತನ್ನಾ ನಾಸುಚ್ ಹೊವ್ನ್ ಗೆಲಿ ಕಾಯ್? ನಾ ತಸೆ ಹೊವುಕುಚ್‍ನಾ! ತೆನಿ ಪಾಪ್ ಕರ್‍ಲ್ಯಾನಿ, ಜುದೆವ್ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿಸರ್ಕೆ ಕರುಕ್ ಮನುನ್ ಸುಟ್ಕಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾತ್ನಿ ಯೆಲ್ಲಿ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:11
14 ತಿಳಿವುಗಳ ಹೋಲಿಕೆ  

ಅದೇ ಪ್ರಕಾರವಾಗಿ ಇಸ್ರಾಯೇಲ್ಯರೂ ಈಗ ಅವಿಧೇಯರಾಗಿದ್ದರೂ ನಿಮಗೆ ದೊರಕಿದ ಕರುಣೆಯನ್ನು ಅವರು ಹೊಂದುವರು.


ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.


ಆದರೆ “ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳಿದುಕೊಳ್ಳಲಿಲ್ಲವೇನು” ಎಂದು ಹೇಳುತ್ತೇನೆ. ಈ ವಿಷಯದಲ್ಲಿ, “ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಅಸೂಯೆ ಹುಟ್ಟುವಂತೆ ಪ್ರೆರೇಪಿಸುತ್ತೇನೆ; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ರೊಚ್ಚಿಗೆಬ್ಬಿಸುವೆನು” ಎಂದು ಮೊದಲು ಮೋಶೆಯು ಹೇಳುತ್ತಾನೆ.


ಇದರಿಂದಾಗಿ ಸ್ವಜನರಲ್ಲಿ ಅಸೂಯೆಯನ್ನು ಕೆರಳಿಸಿ ಅವರಲ್ಲಿ ಕೆಲವರನ್ನು ರಕ್ಷಣೆಯ ಮಾರ್ಗಕ್ಕೆ ತಂದೇನು.


ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ.


ಹಾಗಾದರೆ ದೇವರು ತನ್ನ ಸ್ವಂತ ಜನರನ್ನು ಬೇಡವೆಂದು ತಿರಸ್ಕರಿಸಿದನೋ ಎಂದು ಕೇಳುತ್ತೇನೆ ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲ್ಯನು, ಅಬ್ರಹಾಮನ ಸಂತತಿಯವನು, ಬೆನ್ಯಾಮೀನನ ಕುಲದವನು ಆಗಿದ್ದೇನಲ್ಲಾ.


ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪದಿಂದ ತಿರುಗಿಕೊಂಡು ಜೀವಿಸಿರಿ” ಇದು ಕರ್ತನಾದ ಯೆಹೋವನ ನುಡಿ.


ಪೌಲನೂ, ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು.


ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟುಬಿಡಲಿ; ಇಸ್ರಾಯೇಲಿನ ಮನೆತನದವರೇ ನೀವು ಏಕೆ ಸಾಯಬೇಕು?’” ಇದು ಕರ್ತನಾದ ಯೆಹೋವನ ನುಡಿ.


ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವುದಕ್ಕೆ ಕೊಡುವನು” ಅಂದನು. ಇದನ್ನು ಜನರು ಕೇಳಿ, “ಹಾಗಾಗಬಾರದು” ಅಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು