ರೋಮಾಪುರದವರಿಗೆ 1:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಪ್ರಿಯರೇ, ನನ್ನ ಕೆಲಸವು ಇತರ ಅನ್ಯಜನಗಳಲ್ಲಿ ಸಫಲವಾದಂತೆ ನಿಮ್ಮಲ್ಲಿಯೂ ಸಫಲವಾದೀತೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಮನಸ್ಸು ಮಾಡಿಕೊಂಡಿದ್ದಾಗ್ಯೂ ಇಂದಿನವರೆಗೂ ಅಡ್ಡಿಯಾಯಿತೆಂಬುದು ನೀವು ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಸಹೋದರರೇ, ಈ ವಿಷಯ ನಿಮಗೆ ತಿಳಿದಿರಲಿ; ನನ್ನ ಸೇವೆ ಇತರ ಜನರಲ್ಲಿ ಫಲಪ್ರದವಾದಂತೆ ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ ನಿಮ್ಮ ಬಳಿಗೆ ಬರಲು ನಾನು ಅನೇಕ ಸಾರಿ ಪ್ರಯತ್ನಿಸಿದೆನು. ಆದರೆ, ಕಾರಣಾಂತರಗಳಿಂದ ಇದುವರೆಗೂ ಬರಲು ಸಾಧ್ಯವಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಸಹೋದರರೇ, ನನ್ನ ಕೆಲಸವು ಇತರ ಜನಗಳಲ್ಲಿ ಸಫಲವಾದಂತೆ ನಿಮ್ಮಲ್ಲಿಯೂ ಸಫಲವಾದೀತೆಂದು ನಿಮ್ಮ ಬಳಿಗೆ ಬರುವದಕ್ಕೆ ಅನೇಕಾವರ್ತಿ ಮನಸ್ಸು ಮಾಡಿಕೊಂಡಿದ್ದಾಗ್ಯೂ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂದು ನನ್ನ ಅಪೇಕ್ಷೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ಮಾಜ್ಯಾ ದೊಸ್ತಾನೊ ಮಿಯಾ ತುಮ್ಕಾ ಭೆಟುಚೆ ಮನುನ್ ಕವ್ಡೆಂದಾ ಮನ್ ಕರಲ್ಲೊ ಮನುನ್ ತುಮ್ಕಾ ಯಾದ್ ರ್‍ಹಾಂವ್ದಿತ್, ಖರೆ ಕಾಯ್ಕಿ ಮಾಕಾ ಯೆವ್ನ್ ತುಮ್ಕಾ ಭೆಟುಕ್ ಸೊಡಿನಸಿ. ಕಶೆ ದುಸ್ರ್ಯಾಕ್ಡೆ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿ ಖರ್‍ಯಾ ದೆವಾಕ್ ವಳ್ಕಿ ಸರ್ಕೆ ಮಿಯಾ ಕರ್‍ಲಾ, ತಸೆಚ್ ತುಮ್ಚ್ಯಾತ್ಲ್ಯಾ ಲೊಕಾಕ್ನಿ ಮಾಕಾ ಜಿಕುನ್ ಘೆವ್ಕ್ ಪಾಜೆ. ಅಧ್ಯಾಯವನ್ನು ನೋಡಿ |