Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 4:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಬೋವಜನು ಹಿರಿಯರಿಗೂ, ಎಲ್ಲಾ ಜನರಿಗೂ “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಎಂಬುವರಿಗಿದ್ದದ್ದನ್ನೆಲ್ಲಾ ನವೊಮಿಯಿಂದ ತೆಗೆದುಕೊಂಡಿದ್ದೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆಗ ಬೋವಜನು ಊರಿನ ಹಿರಿಯರೆಲ್ಲರಿಗೆ ಹಾಗು ಅಲ್ಲಿ ನೆರೆದಿದ್ದ ಜನರಿಗೆ, “ಎಲಿಮೆಲೆಕನಿಗೆ ಮತ್ತು ಕಲ್ಯೋನ್, ಮಹ್ಲೋನ್ ಇವರಿಗೆ ಸೇರಿದ್ದ ಆಸ್ತಿ ಎಲ್ಲವನ್ನೂ ನವೊಮಿಯಿಂದ ನಾನು ಕೊಂಡುಕೊಂಡಿದ್ದೇನೆ. ಇದಕ್ಕೆ ನೀವೆಲ್ಲರೂ ಸಾಕ್ಷಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ - ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಎಂಬವರಿಗಿದ್ದದ್ದನ್ನೆಲ್ಲಾ ನೊವೊವಿುಯಿಂದ ತೆಗೆದುಕೊಂಡಿದ್ದೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಇವರೆಲ್ಲರ ಆಸ್ತಿಯನ್ನು ನೊವೊಮಿಯಿಂದ ಕೊಂಡುಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆಗ ಬೋವಜನು ಹಿರಿಯರಿಗೂ ಸಮಸ್ತ ಜನರಿಗೂ, “ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬುದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 4:9
6 ತಿಳಿವುಗಳ ಹೋಲಿಕೆ  

ಆ ಮನುಷ್ಯನ ಹೆಸರು ಎಲೀಮೆಲೆಕ, ಅವನ ಹೆಂಡತಿ ನವೊಮಿ. ಅವನ ಇಬ್ಬರು ಮಕ್ಕಳ ಹೆಸರು ಮಹ್ಲೋನ್ ಮತ್ತು ಕಿಲ್ಯೋನ್. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಮೋವಾಬ್ ದೇಶದಲ್ಲಿ ಬಂದು ವಾಸವಾಗಿದ್ದಾಗ


ಹಾಗೆಯೇ ಆ ಸಮೀಪಬಂಧುವು ಬೋವಜನಿಗೆ “ನೀನೇ ತೆಗೆದುಕೋ” ಎಂದು ಹೇಳಿ ತನ್ನ ಪಾದರಕ್ಷೆಯನ್ನು ತೆಗೆದುಕೊಟ್ಟನು.


ಇದಲ್ಲದೆ ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ಉಳಿದು, ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ ಇದಕ್ಕೆ ನೀವೇ ಸಾಕ್ಷಿಗಳು” ಎಂದು ಹೇಳಿದನು.


“ಹಾಗಲ್ಲ ಸ್ವಾಮಿ, ನನ್ನ ಮಾತನ್ನು ಲಾಲಿಸು. ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ನಿನಗೆ ದಾನವಾಗಿ ಕೊಡುತ್ತೇನೆ; ನನ್ನ ಜನರ ಮುಂದೆಯೇ ಕೊಡುತ್ತೇನೆ; ಮರಣಹೊಂದಿದ ನಿನ್ನ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು