ಯೋಹಾನ 19:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ಕಂಡೊಡನೆ, “ಇವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಬೊಬ್ಬೆಹಾಕಿದರು. ಆಗ ಪಿಲಾತನು, “ಬೇಕಾದರೆ ನೀವೇ ಇವನನ್ನು ಕರೆದುಕೊಂಡು ಹೋಗಿ ಶಿಲುಬೆಗೇರಿಸಿ, ನನಗಾದರೋ ಇವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಮಹಾಯಾಜಕರೂ ಓಲೇಕಾರರೂ ಆತನನ್ನು ಕಾಣುತ್ತಲೇ - ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು ಎಂದು ಕೂಗಿದರು. ಪಿಲಾತನು ಅವರಿಗೆ - ಬೇಕಾದರೆ ನೀವೇ ಅವನನ್ನು ತಕ್ಕೊಂಡುಹೋಗಿ ಶಿಲುಬೆಗೆ ಹಾಕಿಸಿರಿ; ನನಗೆ ಅವನಲ್ಲಿ ಅಪರಾಧವು ಕಾಣಿಸಲಿಲ್ಲವೆಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು. ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ನೋಡಿದಾಗ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು!” ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ಶಿಲುಬೆಗೆ ಹಾಕಿರಿ. ಏಕೆಂದರೆ ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ,” ಎಂದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ಯಾಜಕಾಂಚ್ಯಾ ಮುಖಂಡಾನಿ, ಅನಿ ದೆವಾಚ್ಯಾ ಗುಡಿಚ್ಯಾ ರಾಕ್ವಾಲ್ಯಾನಿ ತೆಕಾ ಬಗಟಲ್ಲ್ಯಾ ಬರಬ್ಬರ್, “ತೆಕಾ ಕುರ್ಸಾರ್ ಮಾರ್! ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ. ಪಿಲಾತಾನ್ ತೆಂಕಾ “ತುಮಿಚ್ ತೆಕಾ ಘೆವ್ನ್ ಜಾವಾ, ಅನಿ ಕುರ್ಸಾರ್ ಮಾರಾ, ಮಾಕಾ ತೆಕಾ ಮರ್‍ನಾಚಿ ಶಿಕ್ಷಾ ದಿ ಸರ್ಕೆ ಚುಕ್ ತೆಚ್ಯಾ ಭುತ್ತುರ್ ಗಾವುಕ್ನಾ” ಮಟ್ಲ್ಯಾನ್. ಅಧ್ಯಾಯವನ್ನು ನೋಡಿ |