Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 12:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆತನಲ್ಲಿ ಬಲವೂ, ಸಾಮರ್ಥ್ಯವೂ ಉಂಟು; ತಪ್ಪಿದವನೂ, ತಪ್ಪಿಸಿದವನೂ ಆತನಿಗೆ ಅಧೀನರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸಾಮರ್ಥ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆತನಲ್ಲಿ ಬಲವೂ ಸಾಮರ್ಥ್ಯವೂ ಉಂಟು; ತಪ್ಪಿದವನೂ ತಪ್ಪಿಸಿದವನೂ ಆತನಿಗೆ ಒಳಪಟ್ಟಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ದೇವರು ಬಲಿಷ್ಠನಾಗಿರುವುದರಿಂದ ಯಾವಾಗಲೂ ಜಯಗಳಿಸುತ್ತಾನೆ. ಗೆಲ್ಲುವವರೂ ಸೋಲುವವರೂ ಆತನವರೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಬಲವೂ, ಜ್ಞಾನವೂ ದೇವರಲ್ಲಿವೆ; ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 12:16
10 ತಿಳಿವುಗಳ ಹೋಲಿಕೆ  

“ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು.


ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೆಯದಾಗುವುದೋ? ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ?


ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೆಡುಕನಿಂದ; ನಮ್ಮನ್ನು ತಪ್ಪಿಸು


ದೇವರ ಪಕ್ಷವಾಗಿ ಅನ್ಯಾಯವನ್ನು ನುಡಿಯುವಿರೋ? ಆತನಿಗೋಸ್ಕರ ಮೋಸದ ಮಾತುಗಳನ್ನಾಡುವಿರೋ?


ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು, ಆಲೋಚನೆಯೂ, ವಿವೇಕವೂ ಆತನವೇ.


“ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ! ಜ್ಞಾನ ತ್ರಾಣಗಳು ಆತನವುಗಳೇ.


ಆದರೆ ಮನುಷ್ಯರಲ್ಲಿ ಆತ್ಮವೊಂದುಂಟು, ಸರ್ವಶಕ್ತನಾದ ದೇವರ ಶ್ವಾಸದಿಂದ ಅವರಿಗೆ ವಿವೇಕ ದೊರೆಯುತ್ತದೆ.


ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳಿವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.


ಇಗೋ, ಆತನು ವಿವೇಕಿ, ತನ್ನ ಮಾತನ್ನು ಹಿಂದಕ್ಕೆ ತೆಗೆಯದೆ ಕೇಡನ್ನು ಬರಮಾಡುವನು. ಕೆಡುಕರ ಮನೆತನಕ್ಕೂ, ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು