ಯೋನನು 1:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಹೀಗಿರಲು, ಅವರು ಸಹ ಯೆಹೋವನಿಗೆ ಮೊರೆಯಿಟ್ಟು, “ಯೆಹೋವನೇ, ಈ ಮನುಷ್ಯನ ಪ್ರಾಣನಷ್ಟದಿಂದ ಆಗುವ ಕೇಡು ನಮ್ಮ ಮೇಲೆ ಬಾರದಿರಲಿ; ನಿರಪರಾಧಿಯನ್ನು ಕೊಂದ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಯೆಹೋವನೇ, ನೀನೇ ನಿನ್ನ ಚಿತ್ತಾನುಸಾರವಾಗಿ ಇದನ್ನು ಮಾಡಿದ್ದಿಯಲ್ಲಾ” ಎಂದು ಬಿನ್ನವಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಆಗ ಅವರು ಬೇರೆ ದಿಕ್ಕುತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: “ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?’ ಎಂದು ದೈನ್ಯದಿಂದ ಪ್ರಾರ್ಥಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಹೀಗಿರಲು ಅವರು ಯೆಹೋವನಿಗೆ ಮೊರೆಯಿಟ್ಟು - ಯೆಹೋವನೇ, ಲಾಲಿಸು, ಲಾಲಿಸು; ಈ ಮನುಷ್ಯನ ಪ್ರಾಣನಷ್ಟಕ್ಕಾಗಿ ನಾಶನವು ನಮಗೆ ಬಾರದಿರಲಿ; ನಿರಪರಾಧಿಯನ್ನು ಕೊಲ್ಲುವ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಆಗ ಆ ಜನರು ಯೆಹೋವನಿಗೆ, “ಯೆಹೋವನೇ, ಈ ಮನುಷ್ಯನು ಕೆಟ್ಟಕಾರ್ಯ ಮಾಡಿದ್ದರಿಂದ ನಾವು ಇವನನ್ನು ಸಮುದ್ರಕ್ಕೆ ಬಿಸಾಡುತ್ತೇವೆ. ನಾವು ಒಬ್ಬ ನಿರಪರಾಧಿಯನ್ನು ಕೊಂದೆವು ಎಂಬ ಅಪರಾಧವನ್ನು ನಮ್ಮ ಮೇಲೆ ಹೊರಿಸಬೇಡ. ಅವನನ್ನು ಕೊಂದದ್ದಕ್ಕಾಗಿ ನಮ್ಮನ್ನು ಕೊಲ್ಲಬೇಡ. ನೀನು ಯೆಹೋವನೆಂದು ನಮಗೆ ಗೊತ್ತಿದೆ. ನಿನಗೆ ಇಷ್ಟಬಂದದ್ದನ್ನು ನೀನು ನೆರವೇರಿಸುವೆ. ಆದ್ದರಿಂದ ದಯವಿಟ್ಟು ನಮಗೆ ಕರುಣೆ ತೋರಿಸು” ಅಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಆಗ ಅವರು ಯೆಹೋವ ದೇವರಿಗೆ ಕೂಗಿ, “ಯೆಹೋವ ದೇವರೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ. ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡಿರಿ. ಯೆಹೋವ ದೇವರೇ, ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |