ಯೆಹೋಶುವ 6:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿ ಕೇಳುತ್ತಲೇ ನೀವೆಲ್ಲರು ಗಟ್ಟಿಯಾಗಿ ಕೇಕೆ ಹಾಕಿ ಆರ್ಭಟಿಸಿರಿ. ಆಗ ನಗರದ ಗೋಡೆ ತಾನೇ ತಾನಾಗಿ ಬಿದ್ದುಹೋಗುವುದು. ಆಗ ಪ್ರತಿಯೊಬ್ಬನು ನೆಟ್ಟಗೆ ಒಳನುಗ್ಗಬಹುದು,” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಯಾಜಕರು ಕೊಂಬುಗಳನ್ನು ಊದಬೇಕು. ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಮಹತ್ತರವಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವದು; ಪ್ರತಿಯೊಬ್ಬನೂ ನೆಟ್ಟಗೆ ಒಳನುಗ್ಗಬಹುದು ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |