Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 4:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆ ದಿನದಲ್ಲಿ ಯೆಹೋವನು ಯೆಹೋಶುವನನ್ನು ಎಲ್ಲಾ ಇಸ್ರಾಯೇಲ್ಯರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಹೇಗೆ ನಡೆದುಕೊಂಡರೋ ಹಾಗೆಯೇ ಯೆಹೋಶುವನು ಭಯ ಮತ್ತು ಗೌರವದಿಂದ ನಡೆದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆ ದಿನ ಸರ್ವೇಶ್ವರ ಯೆಹೋಶುವನನ್ನು ಇಸ್ರಯೇಲರೆಲ್ಲರ ದೃಷ್ಟಿಯಲ್ಲಿ ಇಷ್ಟು ಘನಪಡಿಸಿದ್ದರಿಂದ ಅವರು ಮೋಶೆಯಲ್ಲಿ ಹೇಗೋ ಹಾಗೆಯೇ ಇವನಲ್ಲಿಯೂ, ಇವನು ಜೀವದಿಂದಿದ್ದ ಕಾಲವೆಲ್ಲ ಗೌರವವುಳ್ಳವರು ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆ ದಿವಸ ಯೆಹೋವನು ಯೆಹೋಶುವನನ್ನು ಇಸ್ರಾಯೇಲ್ಯರೆಲ್ಲರ ದೃಷ್ಟಿಯಲ್ಲಿ ಘನಪಡಿಸಿದ್ದರಿಂದ ಅವರು ಮೋಶೆಯಲ್ಲಿ ಹೇಗೋ ಹಾಗೆಯೇ ಇವನಲ್ಲಿಯೂ ಇವನು ಜೀವದಿಂದಿದ್ದ ಕಾಲವೆಲ್ಲಾ ಭಯಭಕ್ತಿಯುಳ್ಳವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೋವನು ಆ ದಿನ ಇಸ್ರೇಲಿನ ಎಲ್ಲಾ ಜನರ ದೃಷ್ಟಿಯಲ್ಲಿ ಯೆಹೋಶುವನನ್ನು ಘನವಂತನನ್ನಾಗಿ ಮಾಡಿದನು. ಆ ಹೊತ್ತಿನಿಂದ ಜನರು ಯೆಹೋಶುವನನ್ನು ಗೌರವಿಸತೊಡಗಿದರು. ಅವರು ಮೋಶೆಯನ್ನು ಗೌರವಿಸಿದಂತೆ ಯೆಹೋಶುವನನ್ನು ಅವನ ಜೀವಮಾನವೆಲ್ಲಾ ಗೌರವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆ ದಿನದಲ್ಲಿ ಯೆಹೋವ ದೇವರು ಯೆಹೋಶುವನನ್ನು ಇಸ್ರಾಯೇಲರೆಲ್ಲರ ಮುಂದೆ ಘನಪಡಿಸಿದರು. ಅವರು ಮೋಶೆಯನ್ನು ಗೌರವಿಸಿದ ಹಾಗೆಯೇ, ಅವನಿಗೂ ಅವನು ಬದುಕಿದ ದಿನಗಳಲ್ಲೆಲ್ಲಾ ಗೌರವ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 4:14
14 ತಿಳಿವುಗಳ ಹೋಲಿಕೆ  

ಆಗ ಯೆಹೋವನು ಯೆಹೋಶುವನಿಗೆ “ನಾನು ಈ ದಿನ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂದು ಅವರಿಗೆ ಗೊತ್ತಾಗುವುದು.


ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ ಪ್ರೇರಣೆಹೊಂದಿ ಏಕ ಮನಸ್ಸುಳ್ಳವರಾಗಿ, ಯೆಹೋವನ ವಾಕ್ಯಕ್ಕೆ ಅನುಸಾರವಾಗಿ ಅರಸನಿಂದಲೂ, ಪದಾಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.


ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.


ಇಸ್ರಾಯೇಲರೆಲ್ಲರೂ ಈ ತೀರ್ಪನ್ನು ಕೇಳಿ ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೈವಜ್ಞಾನವಿದೆ ಎಂದು ತಿಳಿದು ಅವನಿಗೆ ಬಹಳವಾಗಿ ಭಯಪಟ್ಟರು.


ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, ತಿರುಗಿಬೀಳುವವರ ಗೊಡವೆಗೆ ಹೋಗಬೇಡ.


ಆಗ ಯೆಹೋವನು ಗುಡುಗು ಮಳೆಗಳನ್ನು ಕಳುಹಿಸಿದನು. ಎಲ್ಲಾ ಜನರು ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು


ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು.


ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು.


ಸುಮಾರು ನಲವತ್ತು ಸಾವಿರ ಭಟರು ಯುದ್ಧಮಾಡುವುದಕ್ಕಾಗಿ ಯೆಹೋವನ ಸಮ್ಮುಖದಲ್ಲಿ ಯೆರಿಕೋವಿನ ಬೈಲಿಗೆ ಬಂದರು:


ಯೆಹೋವನು ಯೆಹೋಶುವನ ಸಂಗಡ ಮಾತನಾಡಿ “ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಯೊರ್ದನಿನ ಹೊಳೆಯಿಂದ ಮೇಲೆ ಬರಬೇಕೆಂದು ಆಜ್ಞಾಪಿಸು” ಎಂದನು.


ಯೆಹೋವನು ಇಸ್ರಾಯೇಲರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದನು. ಇದಲ್ಲದೆ ಐಗುಪ್ತ ದೇಶದಲ್ಲಿ ಫರೋಹನ ಪ್ರಜಾಪರಿವಾರದವರು ಹಾಗು ಜನರು ಮೋಶೆಯನ್ನು ಮಹಾಶ್ರೇಷ್ಠಪುರುಷನೆಂದು ಭಾವಿಸಿದರು.


ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಳಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿದೆ” ಎಂದು ತಿಳಿದುಕೊಂಡು ಅವನನ್ನು ಎದುರುಗೊಂಡು, ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.


ಯೆಹೋವನು ಇಸ್ರಾಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲರನ್ನು ಆಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು