ಯೆಹೋಶುವ 24:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆಗ ಯೆಹೋಶುವನು ಅವರಿಗೆ, “ನೀವು ಯೆಹೋವನನ್ನು ಸೇವಿಸಲು ಶಕ್ತರಲ್ಲ. ಯೆಹೋವನು ಪರಿಶುದ್ಧನು; ತನಗೆ ಸಲ್ಲಿಸಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಆತನು ನಿಮ್ಮ ಪಾಪ, ಅಪರಾಧಗಳನ್ನೂ, ಕ್ಷಮಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಆಗ ಯೆಹೋಶುವನು ಅವರಿಗೆ, “ನೀವು ಸರ್ವೇಶ್ವರನಿಗೆ ಸೇವೆಸಲ್ಲಿಸಲು ಶಕ್ತರಲ್ಲ. ಸರ್ವೇಶ್ವರಸ್ವಾಮಿ ಪರಿಶುದ್ಧರು; ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಅವರು ನಿಮ್ಮ ಪಾಪ, ಅಪರಾಧಗಳನ್ನು ಕ್ಷಮಿಸರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆಗ ಯೆಹೋಶುವನು ಅವರಿಗೆ - ನೀವು ಯೆಹೋವನನ್ನು ಸೇವಿಸಲಾರಿರಿ. ಆತನು ಪರಿಶುದ್ಧನೂ ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದವನೂ ಆಗಿರುವ ದೇವರು. ಆತನು ನಿಮ್ಮ ದ್ರೋಹಾಪರಾಧಗಳನ್ನು ಕ್ಷವಿುಸುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಆಗ ಯೆಹೋಶುವನು ಅವರಿಗೆ, “ಅದು ನಿಜವಲ್ಲ, ನೀವು ಯೆಹೋವನ ಸೇವೆಯನ್ನು ಮುಂದುವರೆಸಿಕೊಂಡು ಹೋಗಲಾರಿರಿ. ನಮ್ಮ ದೇವರಾದ ಯೆಹೋವನು ಪವಿತ್ರನಾಗಿದ್ದಾನೆ; ತನ್ನ ಜನರು ಅನ್ಯದೇವರುಗಳನ್ನು ಪೂಜಿಸುವುದನ್ನು ಆತನು ದ್ವೇಷಿಸುತ್ತಾನೆ. ಒಂದುವೇಳೆ ನೀವೇನಾದರೂ ಆತನ ವಿರುದ್ಧವಾಗಿ ತಿರುಗಿಕೊಂಡರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸಲಾರಿರಿ. ಏಕೆಂದರೆ ಅವರು ಪರಿಶುದ್ಧ ದೇವರು, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ತೀಕ್ಷ್ಣ ದೇವರು. ಅವರು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸರು. ಅಧ್ಯಾಯವನ್ನು ನೋಡಿ |