ಯೆಹೋಶುವ 22:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವತ್ತಾದ ಗಿಲ್ಯಾದ್ ದೇಶಕ್ಕೆ ಹೊರಟು ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆಗ ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಕುಲದ ಅರ್ಧಜನರು ಕಾನಾನ್ ನಾಡಿನ ಶಿಲೋವಿನಲ್ಲಿದ್ದ ಇಸ್ರಯೇಲರನ್ನು ಬಿಟ್ಟು ಸರ್ವೇಶ್ವರನ ಆಜ್ಞೆಗನುಸಾರ ಮೋಶೆಯಿಂದ ತಮಗೆ ದೊರಕಿದ ಸೊತ್ತಾದ ಗಿಲ್ಯಾದ್ ನಾಡಿಗೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲ್ಯರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವಾಸ್ತ್ಯವಾದ ಗಿಲ್ಯಾದ್ ದೇಶಕ್ಕೆ ಹೋದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆದ್ದರಿಂದ ರೂಬೇನ್ ಕುಲದವರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇಸ್ರೇಲಿನ ಬೇರೆ ಕುಲದ ಜನರನ್ನು ಬಿಟ್ಟು ಹೊರಟರು. ಅವರು ಕಾನಾನಿನ ಶೀಲೋವಿನಲ್ಲಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಗಿಲ್ಯಾದ್‌ಗೆ ಹಿಂದಿರುಗಿ ಹೋದರು. ಮೋಶೆಯು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದ ತಮ್ಮ ಪ್ರದೇಶಕ್ಕೆ ಅವರು ಹೋದರು. ಅವರಿಗೆ ಈ ಪ್ರದೇಶವನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ರೂಬೇನನ ಗೋತ್ರದವರು, ಗಾದ್ಯ ಗೋತ್ರದವರು, ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು, ಯೆಹೋವ ದೇವರು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ತಾವು ವಶಮಾಡಿಕೊಂಡ ತಮ್ಮ ಗಿಲ್ಯಾದ್ ನಾಡಿಗೆ ಹೋದರು. ಅಧ್ಯಾಯವನ್ನು ನೋಡಿ |