ಯೆಹೋಶುವ 22:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಜನರು ಇಸ್ರಾಯೇಲ ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್ ನದಿಯ ತೀರಪ್ರದೇಶದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ಮಿಕ್ಕ ಇಸ್ರಾಯೇಲರಿಗೂ ತಿಳಿದಾಗ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು ಇಸ್ರಯೇಲ್ ನಾಡಾದ ಕಾನಾನಿನ ಪೂರ್ವಕ್ಕಿರುವ ಜೋರ್ಡನ್ ನದಿಯ ತೀರಪ್ರದೇಶದಲ್ಲಿ ಬಲಿಪೀಠವನ್ನು ಕಟ್ಟಿದ್ದಾರೆಂಬ ಸುದ್ದಿ ಮಿಕ್ಕ ಇಸ್ರಯೇಲರಿಗೆ ಮುಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಇಸ್ರಾಯೇಲ್‍ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್‍ಹೊಳೆಯ ತೀರಪ್ರದೇಶದಲ್ಲಿ ವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ವಿುಕ್ಕ ಇಸ್ರಾಯೇಲ್ಯರಿಗೆ ಮುಟ್ಟಿದಾಗ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಇನ್ನೂ ಶೀಲೋವಿನಲ್ಲಿದ್ದ ಇಸ್ರೇಲಿನ ಉಳಿದ ಜನರು, ಈ ಮೂರು ಕುಲದವರು ಕಟ್ಟಿಸಿದ ಯಜ್ಞವೇದಿಕೆಯ ಬಗ್ಗೆ ಕೇಳಿದರು. ಕಾನಾನಿನ ಗಡಿಯ ಬಳಿಯಿರುವ ಗೆಲಿಲೋತ್ ಎಂಬಲ್ಲಿ ಇದನ್ನು ಕಟ್ಟಲಾಗಿದೆ ಎಂಬುದು ಅವರಿಗೆ ತಿಳಿಯಿತು. ಇದು ಇಸ್ರೇಲರಿಗೆ ಸೇರಿದ ಜೋರ್ಡನ್ ನದಿಯ ಸಮೀಪದಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಕಾನಾನ್ ದೇಶಕ್ಕೆ ಎದುರಾಗಿ ಇಸ್ರಾಯೇಲರು ದಾಟಿಬಂದ ಯೊರ್ದನ್ ನದಿ ಪ್ರಾಂತದಲ್ಲಿ ಬಲಿಪೀಠವನ್ನು ಕಟ್ಟಿದರೆಂಬ ಸುದ್ದಿ ಇಸ್ರಾಯೇಲರಿಗೆ ಮುಟ್ಟಿತು. ಅಧ್ಯಾಯವನ್ನು ನೋಡಿ |