Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆಕೋರಿನ ಕಣಿವೆ ಇವುಗಳ ಮೇಲೆ ದೆಬೇರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್ ಏನ್ ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ ಏನ್ ರೋಗೆಲ್ ಇವುಗಳ ಮೇಲೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಇವುಗಳ ಮೇಲೆ ದೆಬೀರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ನದಿಯ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್, ಏನ್ ಷೆಮೆಷ್ ಎನ್ನುವ ಬುಗ್ಗೆ, ಏನ್ ರೋಗೆಲ್ ಇವುಗಳ ಮೇಲೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಕೋರಿನ ತಗ್ಗು ಇವುಗಳ ಮೇಲೆ ದೆಬೀರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀವಿುಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್, ಏನ್‍ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ, ಏನ್‍ರೋಗೆಲ್ ಇವುಗಳ ಮೇಲೆ ಬೆನ್‍ಹಿನ್ನೋಮನ ತಗ್ಗಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅಲ್ಲಿಂದ ಅದು ಆಕೋರಿನ ಕಣಿವೆಯಿಂದ ಹಾದು ದೆಬೀರಕ್ಕೆ ಮುಟ್ಟಿ ಅಲ್ಲಿ ಉತ್ತರಕ್ಕೆ ತಿರುಗಿ ಗಿಲ್ಗಾಲಕ್ಕೆ ಮುಟ್ಟಿತ್ತು. ಅದು ಮೀಮಿನ ಬೆಟ್ಟದಿಂದ ಹೋಗುವ ದಾರಿಯ ಎದುರಿಗೆ ಗಿಲ್ಗಾಲ್ ಇದೆ. ಅದು ಹಳ್ಳದ ದಕ್ಷಿಣ ಭಾಗದಲ್ಲಿದೆ. ಈ ಸೀಮೆಯು ಏನ್‌ಷೆಮೆಷ್ ನದಿಯವರೆಗೆ ಹೋಗಿ ಏನ್‌ರೋಗೆಲ್‌ನಲ್ಲಿ ಕೊನೆಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಗೆ ತಿರುಗಿಕೊಂಡು ದಕ್ಷಿಣದಲ್ಲಿರುವ ಅದುಮೀಮಿನ ದಿಬ್ಬೆಗೆ ಎದುರಾಗಿರುವ ಗಿಲ್ಗಾಲಿಗೂ, ಅಲ್ಲಿಂದ ಏನ್ ಷೆಮೆಷ್ ಎಂಬ ಬುಗ್ಗೆಗೂ, ಅಲ್ಲಿಂದ ಏನ್ ರೋಗೆಲ್‌ವರೆಗೂ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:7
13 ತಿಳಿವುಗಳ ಹೋಲಿಕೆ  

ಅದೋನೀಯನು ರೋಗೆಲ್ ಬುಗ್ಗೆಯ ಬಳಿಯಲ್ಲಿರುವ ಚೋಹೆಲೆತ್ ಬಂಡೆಯ ಮೇಲೆ ಕುರಿ, ಹೋರಿ ಮೊದಲಾದ ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ರಾಜಪುತ್ರರಾದ ತನ್ನ ಉಳಿದ ಸಹೋದರರನ್ನೂ ಅರಸನ ಅಧಿಕಾರಿಗಳಾದ ಎಲ್ಲಾ ಯೆಹೂದ್ಯರನ್ನೂ ಔತಣಕ್ಕೆ ಆಮಂತ್ರಿಸಿದನು.


ಯೋನಾತಾನ ಮತ್ತು ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿಯು ಎಲ್ಲಾ ವರ್ತಮಾನಗಳನ್ನು ಇವರಿಗೂ ಮತ್ತು ಇವರ ಅರಸನಾದ ದಾವೀದನಿಗೂ ಮುಟ್ಟಿಸುವಂತೆ ಗೊತ್ತುಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಕ್ಕೆ ಬರಲಿಲ್ಲ.


ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ರಾಶಿಯು ನಿರ್ಮಾಣವಾಯಿತು. ಅದು ಇಂದಿನ ವರೆಗೂ ಇದೆ. ಆಗ ಯೆಹೋವನ ಕೋಪಾಗ್ನಿ ತಣ್ಣಗಾಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.


ಅವರ ತಾಯಿ ವ್ಯಭಿಚಾರ ಮಾಡಿದ್ದಾಳೆ, ಹೆತ್ತವಳು ನಾಚಿಕೆಗೇಡಿಯಾಗಿ ನಡೆದಿದ್ದಾಳೆ. ‘ತನಗೆ ಬೇಕಾದ ಅನ್ನ ಪಾನಗಳನ್ನೂ, ಉಣ್ಣೆ ನಾರುಗಳನ್ನೂ, ತೈಲವನ್ನೂ ಪಾನಕಗಳನ್ನೂ ತನಗೆ ಕೊಡುವ ಹಾಗೂ ತನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿಸಿಕೊಂಡವರ ಹಿಂದೆ ಹೋಗುವೆನು ಅಂದುಕೊಂಡಿದ್ದಾಳೆ.’”


ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು.


ಆನಂತರ ಅವನು ಹೊರಟು ಕಿರ್ಯತಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧ ಮಾಡಿದನು.


ತರುವಾಯ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.


ಯೆಹೋಶುವನೂ ಮತ್ತು ಎಲ್ಲಾ ಇಸ್ರಾಯೇಲ್ಯರೂ, ಜೆರಹನ ಮಗನಾದ ಆಕಾನನನ್ನು ಹಿಡಿದು ಬೆಳ್ಳಿ, ನಿಲುವಂಗಿ, ಬಂಗಾರದ ಗಟ್ಟಿ, ಅವನ ಗಂಡುಹೆಣ್ಣು ಮಕ್ಕಳನ್ನು, ದನ ಕರು, ಕತ್ತೆ, ಆಡುಕುರಿಗಳನ್ನು ಮತ್ತು ಗುಡಾರದ ಸಹಿತವಾಗಿ ಹಿಡಿದು ಆಕೋರಿನ ತಗ್ಗಿಗೆ ಒಯ್ದರು.


ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಪೂರ್ವ ಗಡಿಯಲ್ಲಿರುವ ಗಿಲ್ಗಾಲಿನಲ್ಲಿ ಬಂದು ತಂಗಿದರು.


ಬೇತ್ ಹೊಗ್ಲಾ ಬೇತ್ ಆರಾಬದ ಉತ್ತರ ಪ್ರಾಂತ್ಯ ರೂಬೇನನ ಮಗನಾದ ಬೋಹನನ ಬಂಡೆ,


ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಇಳಿಯುತ್ತಾ ಏನ್ ಷೆಮೆಷಿಗೂ, ಅದುಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೋತಕ್ಕೆ ತಲುಪಿ ರೂಬೇನನ ಮಗನಾದ ಬೋಹನನ ಬಂಡೆಯ ತನಕ ಇಳಿದು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು