ಯೆಹೋಶುವ 12:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಇಳಿಜಾರಿನ ಪ್ರದೇಶ, ಕಣಿವೆ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣಪ್ರಾಂತ್ಯ ಇವುಗಳನ್ನೂ ಇವುಗಳನ್ನು ಆಳುತ್ತಿದ್ದ ಹಿತ್ತೀಯ, ಅಮೋರಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ ಅವರ ನಾಡುಗಳನ್ನು ಇಸ್ರಯೇಲ್ ಕುಲಭಾಗಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ : ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಇಳಕಲಿನ ಪ್ರದೇಶ, ತಗ್ಗಾದ ಪ್ರದೇಶ, ಬೆಟ್ಟಗಳ ಬುಡದಲ್ಲಿರುವ ಸೀಮೆ, ಅರಣ್ಯ, ದಕ್ಷಿಣಪ್ರಾಂತ್ಯ ಇವುಗಳಲ್ಲಿ ಆಳುತ್ತಿದ್ದ ಹಿತ್ತಿಯ ಅಮೋರಿಯ ಕಾನಾನ್ ಪೆರಿಜ್ಜೀಯ ಹಿವ್ವಿಯ ಯೆಬೂಸಿಯ ಅರಸರನ್ನು ಸೋಲಿಸಿ ಅವರ ದೇಶಗಳನ್ನು ಇಸ್ರಾಯೇಲ್ ಕುಲಭಾಗಗಳಿಗೆ ಸ್ವಾಸ್ತ್ಯವಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗಂದರೆ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಪರ್ವತ ಪ್ರದೇಶ, ಪಶ್ಚಿಮದಿಕ್ಕಿನ ಇಳಿಜಾರು ಪ್ರದೇಶ, ಜೋರ್ಡನ್ ಕಣಿವೆ, ಪೂರ್ವದಿಕ್ಕಿನ ಬೆಟ್ಟಗಳು, ಮರುಭೂಮಿ ಮತ್ತು ನೆಗೆವ್ ಇದರಲ್ಲಿ ಸೇರಿಕೊಂಡಿದ್ದವು. ಈ ಪ್ರದೇಶವು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ವಾಸಸ್ಥಾನವಾಗಿತ್ತು. ಇಸ್ರೇಲರು ಸೋಲಿಸಿದ ಅರಸರ ಪಟ್ಟಿಯು ಇಂತಿದೆ: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ: ಅಧ್ಯಾಯವನ್ನು ನೋಡಿ |