ಯೆಹೋಶುವ 12:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಇವನ ರಾಜ್ಯ, ಹೆರ್ಮೋನ್ ಮಲೆನಾಡು, ಸಲ್ಕಾನಗರ, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ನಾಡು, ಹೆಷ್ಬೋನಿನ ಅರಸನದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತ್ಯ ಇವುಗಳಿಂದ ಕೂಡಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತವು ಇವೇ ಇವನ ರಾಜ್ಯ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಓಗನು ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಮತ್ತು ಬಾಷಾನಿನ ಎಲ್ಲ ಪ್ರದೇಶ, ಇವುಗಳನ್ನು ಆಳುತ್ತಿದ್ದನು. ಗೆಷೂರ್ಯರು ಮತ್ತು ಮಾಕತೀ ಜನರು ವಾಸಮಾಡುವ ಪ್ರದೇಶವು ಇವನ ರಾಜ್ಯದ ಮೇರೆಯಾಗಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಮೇರೆಯವರೆಗೆ ಹಬ್ಬಿದ ಗಿಲ್ಯಾದಿನ ಅರ್ಧಪ್ರಾಂತ್ಯವನ್ನು ಕೂಡ ಓಗನು ಆಳುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು. ಅಧ್ಯಾಯವನ್ನು ನೋಡಿ |
ತಪ್ಪಿಸಿಕೊಂಡು ಉಳಿದಿದ್ದ ಯೆಹೂದ ಸೇನಾಧಿಪತಿಗಳು ಗೆದಲ್ಯನು ಬಾಬೆಲಿನ ಅರಸನಿಂದ ಅಧಿಪತಿಯಾಗಿ ನೇಮಿಸಲ್ಪಟ್ಟಿದ್ದಾನೆಂಬ ವರ್ತಮಾನವನ್ನು ಕೇಳಿ, ತಮ್ಮ ಜನರೊಡನೆ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು. ಅವರು ಯಾರೆಂದರೆ, ನೆತನ್ಯನ ಮಗನಾದ ಇಷ್ಮಾಯೇಲನು, ಕಾರೇಹನ ಮಗನಾದ ಯೋಹಾನಾನ್, ನೆಟೋಫದವನಾದ, ತನ್ಹುಮೆತನ ಮಗನಾದ ಸೆರಾಯನು, ಮಾಕಾ ಊರಿನವನಾದ ಯಾಜನ್ಯನು ಇವರೇ.