Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 5:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಿನ್ನಲ್ಲಿನ ಮೂರನೆಯ ಒಂದು ಭಾಗದವರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲಿ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲೂ ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಿನ್ನಲ್ಲಿನ ಮೂರನೆಯ ಒಂದು ಭಾಗದ ಜನರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲೆ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲು ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿನ್ನಲ್ಲಿನ ಮೂರನೆಯ ಒಂದು ಭಾಗದವರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲಿ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲು ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಿನ್ನ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನ್ನೊಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನ್ನ ಖಡ್ಗವನ್ನು ಇರಿದು ಉಳಿದವರನ್ನು ಬಹುದೂರದ ದೇಶಕ್ಕೆ ಅಟ್ಟಿಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 5:12
37 ತಿಳಿವುಗಳ ಹೋಲಿಕೆ  

ಮುತ್ತಿಗೆಯ ದಿನಗಳು ಮುಗಿದ ಕೂಡಲೆ ಕೂದಲನ್ನು ಮೂರು ಭಾಗ ಮಾಡಿ, ಪಟ್ಟಣದ ಮಧ್ಯದೊಳಗೆ ಬೆಂಕಿಯಲ್ಲಿ ಸುಡು; ಇನ್ನೊಂದು ಭಾಗವನ್ನು ತೆಗೆದುಕೊಂಡು ಪಟ್ಟಣದ ಸುತ್ತಲು ಖಡ್ಗದಿಂದ ಕಡಿ; ಮತ್ತೊಂದು ಭಾಗವನ್ನು ಗಾಳಿಗೆ ತೂರಿಬಿಡು; ಈ ಪ್ರಕಾರ ನಾನು ನನ್ನ ಜನರ ಹಿಂದೆ ಕತ್ತಿಯನ್ನು ಬೀಸುವೆನು.


ಅವರು, ‘ನಾವು ಎಲ್ಲಿಗೆ ಹೋಗೋಣ?’ ಎಂದು ನಿನ್ನನ್ನು ಕೇಳಲು ನೀನು ಅವರಿಗೆ, ‘ಮರಣ ವ್ಯಾಧಿಗೆ ನೇಮಿತರಾದವರು ಮರಣವ್ಯಾಧಿಗೆ, ಖಡ್ಗಕ್ಕೆ ನೇಮಿತರಾದವರು ಖಡ್ಗಕ್ಕೆ ಬಲಿಯಾಗಲಿ. ಕ್ಷಾಮಕ್ಕೆ ನೇಮಿತರಾದವರು ಕ್ಷಾಮಕ್ಕೆ, ಸೆರೆಗೆ ನೇಮಿತರಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ’” ಎಂದು ಹೇಳು.


ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.


ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.


ಹೀಗಿರಲು, ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.”


ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗ, ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.


ಅವರು ನೋಡದ ಎಲ್ಲಾ ಜನಾಂಗಗಳ ಮಧ್ಯಕ್ಕೆ ಅವರನ್ನು ತೂರಿಬಿಡುವೆನು. ಯೆಹೋವನ ಈ ಮಾತಿನಂತೆ ಅವರು ಚದರಿದ ಮೇಲೆ ದೇಶವು ಹಾಳಾಯಿತು. ಅದರಲ್ಲಿ ಯಾರೂ ಹೋಗುತ್ತಿರಲಿಲ್ಲ, ಬರುತ್ತಿರಲಿಲ್ಲ; ಆ ರಮ್ಯ ದೇಶವನ್ನು ಹಾಳುಮಾಡಿದರು.’”


ಅವರು ತಮ್ಮ ಶತ್ರುಗಳ ವಶವಾಗಿ ಸೆರೆಗೆ ಹೋದರೂ, ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಹತಿಸುವುದು. ಮೇಲಿಗಲ್ಲ, ಕೇಡಿಗಾಗಿಯೇ ಅವರ ಮೇಲೆ ದೃಷ್ಟಿಯಿಡುವೆನು.”


“‘ಆದರೂ ನಾನು ಜನಶೇಷವನ್ನು ಉಳಿಸುವೆನು; ಹೇಗೆಂದರೆ ನೀವು ಅನ್ಯದೇಶಗಳಿಗೆ ಚದರಿಹೋಗುವಾಗ ನಿಮ್ಮಲ್ಲಿ ಕೆಲವರು ಆ ಜನಾಂಗಗಳ ಮಧ್ಯೆ ಕತ್ತಿಗೆ ತಪ್ಪಿಸಿಕೊಳ್ಳುವರು.


ನಾನು ಕಳುಹಿಸುವ ಕ್ಷಾಮದಿಂದಲೂ, ದುಷ್ಟಮೃಗಗಳಿಂದಲೂ ನಿನಗೆ ಪುತ್ರಶೋಕವು ಉಂಟಾಗುವುದು; ವ್ಯಾಧಿಯೂ, ರಕ್ತ ಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು” ಇದು ಯೆಹೋವನಾದ ನನ್ನ ನುಡಿ.


ನೀವು ಯಾವ ಸ್ಥಳದಲ್ಲಿ ವಾಸಮಾಡಲು ಅಪೇಕ್ಷಿಸಿ ಹೋಗುತ್ತೀರೋ ಆ ಸ್ಥಳದಲ್ಲೇ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವಿರಿ ಎಂದು ಖಂಡಿತವಾಗಿ ತಿಳಿಯಿರಿ” ಎಂದು ಹೇಳಿದನು.


ಇವರಿಗಾಗಲಿ ಅಥವಾ ಇವರ ಪೂರ್ವಿಕರಿಗಾಗಲಿ ಗೊತ್ತಿಲ್ಲದ ಜನಾಂಗಗಳೊಳಗೆ ಇವರನ್ನು ಚದರಿಸಿಬಿಟ್ಟು, ಇವರು ನಿರ್ಮೂಲವಾಗುವ ತನಕ ಖಡ್ಗವನ್ನು ಇವರ ಹಿಂದೆ ಕಳುಹಿಸುವೆನು” ಎಂದು ಹೇಳುತ್ತಾನೆ.


ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ; ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ನೀವು ನಡುಗುವ ಹೃದಯವುಳ್ಳವರಾಗಿಯೂ, ದಿಕ್ಕುತೋರದೆ ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಂತೆ ಯೆಹೋವನು ಮಾಡುವನು.


ನಿಮ್ಮನ್ನು ಅನ್ಯಜನಗಳಲ್ಲಿ ಚದುರಿಸಿ, ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವುದು, ನಿಮ್ಮ ಪಟ್ಟಣಗಳು ನಾಶವಾಗುವವು.


ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.


ಆದಕಾರಣ ಬಿರುಗಾಳಿಯು ಬಡಿದುಕೊಂಡು ಹೋಗುವ ಒಣ ಹುಲ್ಲನ್ನೋ ಎಂಬಂತೆ ನಾನು ಅವರನ್ನು ಚದರಿಸಿಬಿಡುವೆನು.


ನಾನು ಅವರಿಗೂ ಅವರ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗಿಂದ ಅವರು ನಿರ್ಮೂಲರಾಗುವ ತನಕ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು” ಎಂದು ಹೇಳುತ್ತಾನೆ.


ಊರ ಹೊರಗೆ ಖಡ್ಗ, ಊರೊಳಗೆ ವ್ಯಾಧಿ ಮತ್ತು ಕ್ಷಾಮಗಳು; ಹೊರಗಿರುವವರು ಖಡ್ಗದಿಂದ ಸಾಯುವರು, ಒಳಗಿರುವವರು ವ್ಯಾಧಿ ಕ್ಷಾಮಗಳಿಗೆ ತುತ್ತಾಗುವರು.


“ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ, ನಾನು ಅದನ್ನು ಆ ದೇಶಕ್ಕೆ ತಂದು, ಜನ ಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ,


“ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ,


ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆ ದುರ್ಗಗಳಲ್ಲಿರುವವರನ್ನು ವ್ಯಾಧಿಯು ಸಾಯಿಸುವುದು.


ಜನಾಂಗಗಳೊಳಗೆ ಅವರನ್ನು ಚದರಿಸಿ, ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ, ದುರಾಚಾರಗಳಿಗೆ ಸರಿಯಾಗಿ ನ್ಯಾಯತೀರಿಸಿದೆನು.


“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ, ಇಸ್ರಾಯೇಲರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕು” ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ, ಎಂದು ಅಪ್ಪಣೆ ಕೊಡುವೆನು.


ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ, “ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು.


ಆದುದರಿಂದ ಆಹಾ, ನಾನು ಈ ಜನರಿಗೆ ವಿಷದ ಆಹಾರವನ್ನು ಮತ್ತು ಕಹಿಯಾದ ಪಾನಗಳನ್ನು ಕೊಡುವೆನು.


ಇವರು ಉಪವಾಸಮಾಡುವಾಗ ಇವರ ಮೊರೆಯನ್ನು ಕೇಳೆನು. ಹೋಮನೈವೇದ್ಯಗಳನ್ನು ಅರ್ಪಿಸಲು ಸ್ವೀಕರಿಸೆನು. ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಇವರನ್ನು ನಿರ್ಮೂಲಮಾಡುವೆನು” ಎಂದು ಹೇಳಿದನು.


ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಳುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ. ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು’” ಇದು ಯೆಹೋವನ ನುಡಿ.


ಈಗಲೇ ನಿನಗೆ ಅಂತ್ಯವು ಬಂದಿದೆ; ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ, ನಿನ್ನ ನಡತೆಗೆ ತಕ್ಕಂತೆ ನ್ಯಾಯತೀರಿಸಿ ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ತಿನ್ನಿಸುವೆನು.


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು!


ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸಲು, ನನ್ನ ರೋಷವು ನಿನ್ನ ಕಡೆಯಿಂದ ತೊಲಗಿ ಬಿಡುವುದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು.


ಯೆರೂಸಲೇಮಿನ ಗುರುತಿನ ಬಾಣವು ಅವನ ಬಲಗೈಗೆ ಸಿಕ್ಕಿದೆ; ಅಲ್ಲಿ ಅವನು ಚಿತ್ತವನ್ನು ಭೇದಿಸುವ ಆಯುಧಗಳನ್ನು ನಿಲ್ಲಿಸಿ, ಬಾಯಿದೆರೆದು ಸಂಹಾರ ಧ್ವನಿಗೈದು ಕೂಗಿ! ಬಾಗಿಲುಗಳ ಎದುರಾಗಿ ಚಿತ್ತ ಭೇದಕ ಯಂತ್ರಗಳನ್ನು ನಿಲ್ಲಿಸಿ, ಒಡ್ಡು ಕಟ್ಟಬೇಕೆಂದು ಅದರಿಂದ ಸೂಚನೆಯಾಯಿತು.


“ಅಂತೆಯೇ ನಿನ್ನ ದುಷ್ಕರ್ಮವು ಅಸಹ್ಯವಾಗಿರುವುದರಿಂದಲೂ, ನಾನು ನಿನ್ನನ್ನು ಎಷ್ಟು ಶುದ್ಧಿಮಾಡಿದರೂ ನೀನು ಶುದ್ಧಿಯಾಗದೆ ಹೋದದ್ದರಿಂದಲೂ ನಾನು ನನ್ನ ರೋಷವನ್ನು ನಿನ್ನಲ್ಲಿ ತೀರಿಸಿ ಶಾಂತನಾಗುವವರೆಗೂ ನೀನು ನಿನ್ನ ಕೊಳೆಯನ್ನು ಇನ್ನು ಕಳೆದುಕೊಳ್ಳದೆ, ಶುದ್ಧಿಯಾಗದೆ ಇರುವಿ.”


ನನ್ನ ಹೊಸ್ತಿಲುಗಳ ಪಕ್ಕದಲ್ಲಿ ತಮ್ಮ ಹೊಸ್ತಿಲುಗಳನ್ನು ಹಾಕಿಕೊಂಡು ನನ್ನ ಮನೆಗೂ, ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ಮೇಲೆ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡುವುದಿಲ್ಲ. ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡಿದರು. ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು