Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 48:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನೀವು ಮೀಸಲು ಭೂಮಿಯಲ್ಲಿ ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳವು ಮತ್ತು ಅಗಲವು ಹತ್ತು ಸಾವಿರ ಮೊಳವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನೀವು ಮೀಸಲು ಭೂಮಿಯಲ್ಲಿ ಸರ್ವೇಶ್ವರನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಐದು ಕಿಲೋಮೀಟರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನೀವು [ಮೀಸಲು ಭೂವಿುಯಲ್ಲಿ] ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಹತ್ತು ಸಾವಿರ ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಈ ಭೂಮಿಯನ್ನು ನೀವು ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ನೀವು ಯೆಹೋವ ದೇವರಿಗೆ ಅರ್ಪಿಸುವಂತಹ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 48:9
5 ತಿಳಿವುಗಳ ಹೋಲಿಕೆ  

ನೀವು ದೇಶವನ್ನು ಸ್ವತ್ತಾಗಿ ಹಂಚುವಾಗ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಬೇಕು. ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ ಇರಲಿ. ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿರಬೇಕು.


ಯೆಹೂದದ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವುದು. ಅದರ ಅಗಲವು ಇಪ್ಪತ್ತೈದು ಸಾವಿರ ಮೊಳ ಉದ್ದವು, ಪೂರ್ವದಿಂದ ಪಶ್ಚಿಮ ಕುಲಗಳ ಪಾಲುಗಳ ಉದ್ದಕ್ಕೆ ಸಮಾನವಾಗಿದೆ. ಅದರ ಮಧ್ಯದಲ್ಲಿ ಪವಿತ್ರಾಲಯವಿರುವುದು.


ಮೀಸಲಾದ ಆ ಪವಿತ್ರ ಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರಕ್ಕೆ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳವು, ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವು, ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿದೆ. ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವುದು.


“ನಮ್ಮ ನಿವಾಸಕ್ಕೆ ಪಟ್ಟಣಗಳನ್ನೂ ಪಶುಗಳಿಗೆ ಗೋಮಾಳಗಳನ್ನೂ ಕೊಡಬೇಕೆಂದು ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ್ದಾನಲ್ಲವೆ?” ಅನ್ನಲು


“ಅವರಿಗೆ ಇದು ಸ್ವಾಸ್ತ್ಯವಾಗುವುದು, ನಾನೇ ಅವರ ಸ್ವತ್ತು; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು