Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 48:22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅರಸನ ಪಾಲಿನ ಎರಡು ಭಾಗಗಳ ಮಧ್ಯದಲ್ಲಿ ಲೇವಿಯರ ಪಾಲಿನ (ಬಡಗಣ) ಮೇರೆಯಿಂದ ಪಟ್ಟಣಕ್ಕೆ ಒಳಪಟ್ಟ ಭೂಮಿಯ (ತೆಂಕಣ) ಮೇರೆಯ ತನಕ ಅಂದರೆ ಯೆಹೂದದ (ತೆಂಕಣ) ಮೇರೆಯಿಂದ ಬೆನ್ಯಾಮೀನಿನ (ಬಡಗಣ) ಮೇರೆಯವರೆಗೆ ಅರಸನ ಪಾಲು ಹರಡಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ರಾಜನ ಪಾಲಿನ ಎರಡು ಭಾಗಗಳ ನಡುವಣ ಲೇವಿಯರ ಪಾಲಿನ ಉತ್ತರದ ಮೇರೆಯಿಂದ ರಾಜಧಾನಿಗೆ ಒಳಪಟ್ಟ ಭೂಮಿಯ ದಕ್ಷಿಣ ಮೇರೆಯ ತನಕ ಅಂದರೆ ಯೆಹೂದ್ಯದ ದಕ್ಷಿಣ ಸರಹದ್ದಿನಿಂದ ಬೆನ್ಯಾಮೀನಿನ ಸರಹದ್ದಿನವರೆಗೆ ರಾಜನ ಪಾಲು ಹರಡಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಪ್ರಭುವಿನ ಪಾಲಿನ [ಎರಡು ಭಾಗಗಳ] ನಡುವಣ ಲೇವಿಯರ ಪಾಲಿನ [ಬಡಗಣ] ಮೇರೆಯಿಂದ ರಾಜಧಾನಿಗೆ ಒಳಪಟ್ಟ ಭೂವಿುಯ [ತೆಂಕಣ] ಮೇರೆಯ ತನಕ ಅಂದರೆ ಯೆಹೂದದ [ತೆಂಕಣ] ಸರಹದ್ದಿನಿಂದ ಬೆನ್ಯಾಮೀನಿನ [ಬಡಗಣ] ಸರಹದ್ದಿನವರೆಗೆ ಪ್ರಭುವಿನ ಪಾಲು ಹರಡಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಇದಲ್ಲದೆ ಲೇವಿಯರ ಸೊತ್ತಿನಿಂದ ಮೊದಲುಗೊಂಡು ಪಟ್ಟಣದ ಸೊತ್ತಿನಿಂದ ಪ್ರಧಾನನ ನಡುವೆ ಇರುವಂಥದ್ದು ಯೆಹೂದದ ಮೇರೆಗೂ ಬೆನ್ಯಾಮೀನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಸಲ್ಲಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 48:22
3 ತಿಳಿವುಗಳ ಹೋಲಿಕೆ  

ಮೀಸಲಾದ ಪವಿತ್ರ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಉಳಿದ ಭೂಮಿಯು ಅರಸನ ಪಾಲಾಗಿರಲಿ. ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯ ಪಶ್ಚಿಮದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ಪ್ರಭುವಿಗೆ ಸೇರತಕ್ಕದ್ದು. ಪವಿತ್ರಾಲಯವೂ ಮೀಸಲಾದ ಪವಿತ್ರ ಕ್ಷೇತ್ರದ ಮಧ್ಯದಲ್ಲಿರುವುದು.


ಉಳಿದ ಕುಲಗಳ ಪಾಲಿನ ಕ್ರಮವೇನೆಂದರೆ, ಪೂರ್ವದಿಂದ ಪಶ್ಚಿಮದ ತನಕ ಬೆನ್ಯಾಮೀನಿಗೆ ಒಂದು ಪಾಲು.


“ಇಸ್ರಾಯೇಲರು ತಾವು ಹೊಂದುವ ಸ್ವತ್ತಿನಲ್ಲಿ ಕೆಲವು ಪಟ್ಟಣಗಳನ್ನೂ, ಆ ಪಟ್ಟಣಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು