Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 47:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಇದು ಪಶ್ಚಿಮದ ಮೇರೆಯಾಗಿದೆ. ಹಮಾತಿನ ದಾರಿಗೆ ಎದುರಿನ (ಕರಾವಳಿಯ) ತನಕ ಮಹಾ ಸಮುದ್ರದವರೆಗೂ ಪಶ್ಚಿಮದ ಮೇರೆಯಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 “ಪಶ್ಚಿಮದಲ್ಲಿ ಉತ್ತರದ ಮೇರೆಯಿಂದ ಹಮಾತಿನ ದಾರಿಗೆ ಎದುರಿನ ಕರಾವಳಿಯ ತನಕ ದೊಡ್ಡ ಸಮುದ್ರವು ಎಲ್ಲೆಯಾಗಿರುವುದು. ಇದು ಪಶ್ಚಿಮದ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಪಡುವಲಲ್ಲಿ [ತೆಂಕಣ] ಮೇರೆಯಿಂದ ಹಮಾತಿನ ದಾರಿಗೆ ಎದುರಿನ [ಕರಾವಳಿಯ] ತನಕ ದೊಡ್ಡ ಸಮುದ್ರವು ಎಲ್ಲೆಯಾಗಿರುವದು. ಇದು ಪಡುವಣ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಪಶ್ಚಿಮದಲ್ಲಿ ಲೆಬೊಹಮಾತ್ ಎಂಬ ಸ್ಥಳದ ಮುಂಭಾಗದಲ್ಲಿರುವ ಸಮುದ್ರ ತೀರವೇ ಪಶ್ಚಿಮ ದಿಕ್ಕಿನ ಮೇರೆಯಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 47:20
7 ತಿಳಿವುಗಳ ಹೋಲಿಕೆ  

ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.


ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು.


ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಸರ್ವ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಗಳಲ್ಲಿಯೂ ಬಾಳ್ ಹೆರ್ಮೊನ್ ಬೆಟ್ಟದಿಂದ ಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು ಇವರೇ.


ಈ ಪ್ರಕಾರ ಸೊಲೊಮೋನನೂ ಹಮಾತಿನ ದಾರಿಯಿಂದ ಐಗುಪ್ತದ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ, ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲರೂ ಅಲ್ಲಿ ಏಳು ದಿನಗಳವರೆಗೂ ಪರ್ಣಶಾಲೆಗಳ ಜಾತ್ರೆ ಆಚರಿಸಿದರು.


ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.


ಈ ರೀತಿಯಾಗಿ ದೇಶವನ್ನು ನೀವು ಇಸ್ರಾಯೇಲಿನ ಎಲ್ಲಾ ಕುಲಕ್ಕೂ ಹಂಚಿಕೊಳ್ಳಬೇಕು.


ಸೇನಾಧೀಶ್ವರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು; ಅವರು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಹೊಳೆಯ ತನಕ, ನಿಮ್ಮನ್ನು ಹಿಂಸಿಸುವರು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು