Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 43:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರ ಎರಡು ಮೊಳ, ಅದರ ಮೇಲಣ ಅಂಚಿನ ಅಗಲ ಒಂದು ಮೊಳ; ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರ ನಾಲ್ಕು ಮೊಳ, ಮೇಲಣ ಅಂಚಿನ ಅಗಲವು ಒಂದು ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನೆಲದ ಮೇಲೆ ಅಂದರೆ, ಕೆಳಭಾಗದ ಮೇಲೆ ಕೆಳಗಣ ಅಂತಸ್ತಿನ ಎತ್ತರವು ಒಂದು ಮೀಟರ್, ಅದರ ಮೇಲಣ ಬಿಡುವಿನ ಅಗಲವು ಐವತ್ತು ಸೆಂಟಿಮೀಟರ್, ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರವು ಎರಡು ಮೀಟರ್; ಮೇಲಿನ ಬಿಡುವಿನ ಅಗಲವು ಐವತ್ತು ಸೆಂಟಿಮೀಟರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಣ ಅಂತಸ್ತಿನ ಎತ್ತರವು ಎರಡು ಮೊಳ, ಅದರ ಮೇಲಣ ಬಿಡುವಿನ ಅಗಲವು ಒಂದು ಮೊಳ; ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರವು ನಾಲ್ಕು ಮೊಳ, ಮೇಲಣ ಬಿಡುವಿನ ಅಗಲವು ಒಂದು ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನೆಲದಿಂದ ಅಡಿಪಾಯದ ತಳದವರೆಗೆ ಅಡಿಪಾಯದ ಎತ್ತರ ಎರಡು ಮೊಳ, ಅದರ ಅಗಲ ಒಂದು ಮೊಳ, ಚಿಕ್ಕ ಸಜ್ಜದಿಂದ ದೊಡ್ಡ ಸಜ್ಜದವರೆಗೆ ನಾಲ್ಕು ಮೊಳ ಎತ್ತರ, ಎರಡು ಮೊಳ ಅಗಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಕೆಳಭಾಗದ ಎತ್ತರವು ಒಂದು ಮೊಳ ಮೇಲಿನ ಕೈ ಅಗಲದಷ್ಟು ಅಂಚಿನ ಉದ್ದವು ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಲೂ ದಿಂಡಿನ ಅಗಲವು ಒಂದು ಮೊಳ. ಇದೇ ಬಲಿಪೀಠ. ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರವು ಎರಡು ಮೊಳ, ಅದರ ಮೇಲಣ ಬಿಡುವಿನ ಅಗಲ ಒಂದು ಮೊಳ. ಸಣ್ಣ ಅಂಚು ಮೊದಲುಗೊಂಡು ದೊಡ್ಡ ಅಂಚಿನವರೆಗೂ ನಾಲ್ಕು ಮೊಳ ಮತ್ತು ಅಗಲವು ಒಂದು ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 43:14
5 ತಿಳಿವುಗಳ ಹೋಲಿಕೆ  

ಆ ಜಾಲರಿಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗಿನವರೆಗೆ ಇದ್ದು ಯಜ್ಞವೇದಿಯ ಅಡಿಯಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು.


ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ, ನಾಲ್ಕು ಕಡೆಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ, ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಅಭಿಮುಖವಾಗಿರಬೇಕು.”


ಆಮೇಲೆ ಅದರ ರಕ್ತದಲ್ಲಿ ಸ್ವಲ್ಪವನ್ನು ನೀನು ತೆಗೆದುಕೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೂ, ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ, ಸುತ್ತಣ ದಿಂಡಿಗೂ ಹಚ್ಚಿ, ಯಜ್ಞವೇದಿಯ ದೋಷವನ್ನು ಪರಿಹರಿಸಿ ಅದನ್ನು ಶುದ್ಧಿಮಾಡು.


ಆಗ ಯಾಜಕನು ಆ ದೋಷಪರಿಹಾರಕ ಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ, ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಹೆಬ್ಬಾಗಿಲಿನ ಕಂಬಗಳಿಗೂ ಹಚ್ಚಬೇಕು.


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ, ನೀತಿನ್ಯಾಯಗಳನ್ನು ನಡೆಸಿರಿ. ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ. ಇದು ಕರ್ತನಾದ ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು