Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 42:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇವುಗಳ ಮುಂದೆ ಮಾರ್ಗವಿತ್ತು. ಅವು ಉತ್ತರದ ಕೋಣೆಗಳಂತೆ ಕಾಣಿಸುತ್ತಿದ್ದವು. ಇವುಗಳ ಉದ್ದವೂ ಮತ್ತು ಅಗಲವೂ ಒಂದೇ ಆಗಿತ್ತು. ಇವುಗಳ ರಚನಾಕ್ರಮ, ನಿರ್ಗಮನದ ಸ್ಥಾನಗಳೆಲ್ಲವೂ ದಕ್ಷಿಣದ ಕೋಣೆಗಳ ಹಾಗೆಯೇ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಇವುಗಳ ಮುಂದೆ ಓಣಿಯೊಂದಿತ್ತು; ಅವು ಉತ್ತರದ ಕೋಣೆಗಳಂತೆ ಕಾಣಿಸುತ್ತಿದ್ದವು. ಇವುಗಳ ಉದ್ದ ಹಾಗು ಅಗಲ ಅವುಗಳ ಉದ್ದ ಹಾಗು ಅಗಲ ಒಂದೆ. ಇವುಗಳ ರಚನಾಕ್ರಮದ್ವಾರ, ನಿರ್ಗಮಸ್ಥಾನಗಳೆಲ್ಲವೂ ಅವುಗಳಂತಿದ್ದವು, ದಕ್ಷಿಣ ಕೋಣೆಗಳು ಹಾಗೆಯೇ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇವುಗಳ ಮುಂದೆ ಓಣಿಯೊಂದಿತ್ತು; ಅವು ಬಡಗಲ ಕೋಣೆಗಳಂತೆ ಕಾಣಿಸುತ್ತಿದ್ದವು, ಇವುಗಳ ಉದ್ದವೂ ಅಗಲವೂ ಅವುಗಳ ಉದ್ದವೂ ಅಗಲವೂ ಒಂದೇ; ಇವುಗಳ ರಚನಾಕ್ರಮ ದ್ವಾರ ನಿರ್ಗಮಸ್ಥಾನಗಳೆಲ್ಲವೂ ಅವುಗಳಂತಿದ್ದವು; ತೆಂಕಲ ಕೋಣೆಗಳು ಹಾಗೆಯೇ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಈ ಕೋಣೆಗಳ ಎದುರಿನಲ್ಲಿ ದಾರಿಯು ಇತ್ತು. ಇದು ಉತ್ತರ ದಿಕ್ಕಿನಲ್ಲಿದ್ದ ಕೋಣೆಗಳಂತೆ ಇತ್ತು. ಅವುಗಳ ಅಳತೆಯೂ ಬಾಗಿಲು ಕದಗಳ ವಿನ್ಯಾಸವೂ ಒಂದೇ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು. ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು. ಉತ್ತರ ದಿಕ್ಕಿನ ಬಾಗಿಲುಗಳು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 42:11
4 ತಿಳಿವುಗಳ ಹೋಲಿಕೆ  

ಕೋಣೆಗಳ ಒಳಗೆ ಹೋಗಲು, ನೂರು ಮೊಳ ಉದ್ದದ ಮತ್ತು ಹತ್ತು ಮೊಳ ಅಗಲದ ಹಾದಿ ಇತ್ತು. ಕೋಣೆಗಳ ಬಾಗಿಲುಗಳು ಉತ್ತರದಿಕ್ಕಿನ ಕಡೆಗಿದ್ದವು.


ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ಆಲಯದ ರೂಪವನ್ನೂ, ವ್ಯವಸ್ಥೆಯನ್ನೂ ಅದರ ಆಗಮನ ಮತ್ತು ನಿರ್ಗಮನಗಳನ್ನೂ ಮತ್ತು ಅದರ ಎಲ್ಲಾ ಕಟ್ಟಳೆಗಳನ್ನೂ, ಸಕಲ ರಚನಾವಿಧಾನಗಳನ್ನೂ, ಸಮಸ್ತ ವಿಧಿಗಳನ್ನೂ, ಸರ್ವ ನಿರ್ಮಾಣ ರೀತಿಗಳನ್ನೂ ಅವರಿಗೆ ತಿಳಿಸು. ಅವರು ಅದರ ಪೂರ್ಣಕ್ರಮವನ್ನೂ, ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ.


ಆಗ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಯೆಹೋವನ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ ಮತ್ತು ಪವಿತ್ರಾಲಯದ ಪ್ರವೇಶವನ್ನೂ, ಪರಿಶುದ್ಧ ಸ್ಥಳದ ಪ್ರತಿಯೊಂದು ಹಾಗುಹೋಗುಗಳನ್ನೂ ಗಮನಿಸು.


ಪಟ್ಟಣದ ನಿರ್ಗಮನ ಹೀಗಿರಬೇಕು: ಉತ್ತರದ ಕಡೆಯ ಉದ್ದ ನಾಲ್ಕು ಸಾವಿರದ ಐನೂರು ಮೊಳವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು