ಯೆಹೆಜ್ಕೇಲನು 40:33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಅದರಲ್ಲಿಯೂ ಮತ್ತು ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ಅದರ ಕೋಣೆಗಳು, ಗೋಡೆ, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರದ ಅಳತೆಯಂತೆ ಇದ್ದವು. ದ್ವಾರದ ಸುತ್ತಲೂ ಕೈಸಾಲೆಯ ಮೇಲೂ ಕಿಟಕಿಗಳಿದ್ದವು. ಆ ಪ್ರವೇಶ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು. ಅಧ್ಯಾಯವನ್ನು ನೋಡಿ |