ಯೆಹೆಜ್ಕೇಲನು 40:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆಮೇಲೆ ಆತನು ನನ್ನನ್ನು ಅಲ್ಲಿಗೆ ತಂದಾಗ, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ನೂಲನ್ನು, ಅಳತೆಯ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲೇ ನಿಂತುಕೊಂಡಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅವರು ನನ್ನನ್ನು ಅಲ್ಲಿಗೆ ತರಲು, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ಹುರಿಯನ್ನೂ ಅಳತೆ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲಿ ನಿಂತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಆತನು ನನ್ನನ್ನು ಅಲ್ಲಿಗೆ ತರಲು ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ಹುರಿಯನ್ನೂ ಅಳತೇಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲಿ ನಿಂತಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಯೆಹೋವನು ನನ್ನನ್ನು ಅಲ್ಲಿಗೆ ಕರೆತಂದನು. ಅಲ್ಲಿ ಒಬ್ಬನು ತಾಮ್ರದಂತೆ ಹೊಳೆಯುತ್ತಿದ್ದನು. ಅವನ ಕೈಯಲ್ಲಿ ಅಳತೆಯ ನೂಲೂ, ಅಳತೆಯ ಕೋಲೂ ಇದ್ದವು. ಅವನು ದ್ವಾರದ ಬಳಿಯಲ್ಲಿ ನಿಂತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಅವರು ನನ್ನನ್ನು ಅಲ್ಲಿಗೆ ತಂದಾಗ, ಅಲ್ಲಿ ಕಂಚಿನಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲೂ ಅಳತೆಯ ಕೋಲೂ ಇತ್ತು. ಅವನು ಬಾಗಿಲಲ್ಲೇ ನಿಂತಿದ್ದನು. ಅಧ್ಯಾಯವನ್ನು ನೋಡಿ |