ಯೆಹೆಜ್ಕೇಲನು 36:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಆದಕಾರಣ ಇಸ್ರಾಯೇಲಿನ ಪರ್ವತಗಳೇ, ಕರ್ತನಾದ ಯೆಹೋವನ ವಾಕ್ಯವನ್ನು ಕೇಳಿರಿ, ಬೆಟ್ಟಗಳಿಗೂ, ಗುಡ್ಡಗಳಿಗೂ, ತೊರೆತಗ್ಗುಗಳಿಗೂ, ಹಾಳುಪ್ರದೇಶಗಳಿಗೂ, ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆದಕಾರಣ ಇಸ್ರಯೇಲಿನ ಪರ್ವತಗಳೇ, ಸರ್ವೇಶ್ವರನಾದ ದೇವರ ಈ ವಾಕ್ಯವನ್ನು ಕೇಳಿರಿ - ಬೆಟ್ಟಗುಡ್ಡಗಳಿಗೆ ತೊರೆತಗ್ಗುಗಳಿಗೆ, ಕಾಡಾದ ಹಾಳು ಪ್ರದೇಶಗಳಿಗೆ, ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೆ ಸರ್ವೇಶ್ವರನಾದ ದೇವರು ಹೀಗೆ ನುಡಿಯುತ್ತಾರೆ : ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆದಕಾರಣ ಇಸ್ರಾಯೇಲಿನ ಪರ್ವತಗಳೇ, ಕರ್ತನಾದ ಯೆಹೋವನ ವಾಕ್ಯಗಳನ್ನು ಕೇಳಿರಿ - ಬೆಟ್ಟಗುಡ್ಡ ತೊರೆತಗ್ಗುಗಳಿಗೂ ಕಾಡಾದ ಹಾಳುಪ್ರದೇಶಗಳಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ ಯೆಹೋವಕರ್ತನು ಹೀಗೆ ನುಡಿಯುತ್ತಾನೆ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಆದ್ದರಿಂದ ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಮಾತುಗಳಿಗೆ ಕಿವಿಗೊಡಿರಿ! ನನ್ನ ಒಡೆಯನಾದ ಯೆಹೋವನು ಬೆಟ್ಟಗುಡ್ಡಗಳಿಗೂ ತೊರೆಗಳಿಗೂ ಕಣಿವೆಗಳಿಗೂ ಪಾಳುಬಿದ್ದ ಸ್ಥಳಗಳಿಗೂ ಮತ್ತು ಅನ್ಯಜನರಿಂದ ಕೊಳ್ಳೆಹೊಡೆಯಲ್ಪಟ್ಟು ಅಪಹ್ಯಾಸಕ್ಕೆ ಒಳಗಾಗಿ ನಿರ್ಜನವಾಗಿರುವ ಪಟ್ಟಣಗಳಿಗೂ ಹೀಗೆನ್ನುತ್ತಾನೆ: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆದ್ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ, ಪರ್ವತಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ ಅಧ್ಯಾಯವನ್ನು ನೋಡಿ |