ಯೆಹೆಜ್ಕೇಲನು 28:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 “‘ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಬುದ್ಧಿಯನ್ನು ಹಾಳು ಮಾಡಿಕೊಂಡೆ; ನಾನು ನಿನ್ನನ್ನು ನೆಲಕ್ಕೆ ಹಾಕಿ, ನಿನ್ನನ್ನು ಅರಸರು ನೋಡುವಂತೆ ಅವರ ಕಣ್ಣ ಮುಂದೆ ಹಾಕುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಸೊಬಗಿನ ನಿಮಿತ್ತ ನೀ ಗರ್ವಿಯಾದೆ ಮೆರೆತದಿಂದ ಬುದ್ಧಿಯನ್ನು ಕಳೆದುಕೊಂಡೆ. ಎಂದೇ, ನಾ ನಿನ್ನನ್ನು ದೊಬ್ಬಿಬಿಟ್ಟೆ, ನೆಲಕೆ ಅರಸರ ಕಣ್ಮುಂದೆ ಎಸೆದೆ ಅವರಿಗೆ ಅವರಿಗೆ ನೋಟವಾಗಲೆಂದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ನೀನು ನಿನ್ನ ಸೊಬಗಿನ ನಿವಿುತ್ತ ಉಬ್ಬಿದ ಮನಸ್ಸುಳ್ಳವನಾಗಿ ನಿನ್ನ ಮೆರೆತದಿಂದ ನಿನ್ನ ಬುದ್ಧಿಯನ್ನು ಹಾಳುಮಾಡಿಕೊಂಡಿ; ಇದರಿಂದ ನಾನು ನಿನ್ನನ್ನು ನೆಲಕ್ಕೆ ದೊಬ್ಬಿ ನೀನು ಅರಸರಿಗೆ ನೋಟವಾಗುವಂತೆ ಅವರ ಕಣ್ಣಮುಂದೆ ಹಾಕಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ನಿನ್ನ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು. ನಿನ್ನ ಘನತೆಯು ನಿನ್ನ ಜ್ಞಾನವನ್ನು ಕೆಡಿಸಿತು. ಆದ್ದರಿಂದ ನಿನ್ನನ್ನು ನೆಲಕ್ಕೆ ದಬ್ಬಿದೆ. ಈಗ ಬೇರೆ ರಾಜರುಗಳು ನಿನ್ನನ್ನೆ ಎವೆಯಿಕ್ಕದೆ ನೋಡುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ನೀನು ನಿನ್ನ ಸೌಂದರ್ಯದ ನಿಮಿತ್ತ ಉಬ್ಬಿದ ಮನಸ್ಸುಳ್ಳವನಾದೆ. ನಿನ್ನ ಮೆರೆತದ ನಿಮಿತ್ತ ನಿನ್ನ ಬುದ್ಧಿಯನ್ನು ಕಳೆದುಕೊಂಡೆ. ಇದರಿಂದ ನಾನು ನಿನ್ನನ್ನು ನೆಲಕ್ಕೆ ದೊಬ್ಬಿ ನೀನು ಅರಸರಿಗೆ ನೋಟವಾಗಲೆಂದೆ ಅವರ ಕಣ್ಣಮುಂದೆ ಎಸೆದೆನು. ಅಧ್ಯಾಯವನ್ನು ನೋಡಿ |