Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 25:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಬಡಿದು, ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದರ ಗತಿಗೆ ಹಿಗ್ಗಿಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಒದೆದು, ಇಸ್ರಯೇಲ್ ನಾಡನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದಕ್ಕೆ ಬಂದ ಗತಿಗೆ ಹಿಗ್ಗಿಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಚಪ್ಪಾಳೆಹೊಡೆದು ಕಾಲಿನಿಂದ ನೆಲವನ್ನು ಬಡಿದು ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಗತಿಗೆ ಹಿಗ್ಗಿಕೊಂಡದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೋವನು ಹೇಳುವುದೇನೆಂದರೆ: ಜೆರುಸಲೇಮ್ ನಾಶವಾಯಿತೆಂದು ನೀವು ಸಂತೋಷಪಟ್ಟಿರಿ. ನೀವು ಚಪ್ಪಾಳೆತಟ್ಟಿ ಕಾಲಿನಿಂದ ನೆಲವನ್ನು ಬಡಿದಿರಿ. ಇಸ್ರೇಲ್ ದೇಶವನ್ನು ಕಡೆಗಣಿಸಿ ನಗಾಡಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 25:6
17 ತಿಳಿವುಗಳ ಹೋಲಿಕೆ  

ಮೋವಾಬ್ಯರೂ, ಅಮ್ಮೋನ್ಯರೂ ಅಹಂಕಾರದಿಂದ ನನ್ನ ಜನರ ಮೇರೆಯನ್ನು ಮೀರಿ, ಅವರನ್ನು ನಿಂದಿಸಿ, ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.


ನಿನ್ನ ತಮ್ಮನ ದುರ್ದಿನದಲ್ಲಿ ಅವನ ಅಪಾಯಕಾಲದಲ್ಲಿ ನೀನು ಸುಮ್ಮನೆ ನೋಡುತ್ತಿರಬಾರದಾಗಿತ್ತು. ಯೆಹೂದ್ಯರ ನಾಶನದ ದಿನದಲ್ಲಿ ಹಿಗ್ಗಬಾರದಾಗಿತ್ತು. ಅವರ ಇಕ್ಕಟ್ಟಿನ ವೇಳೆಯಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು.


ಆ ಪ್ರಾಂತ್ಯಗಳವರು ಸೇನಾಧೀಶ್ವರನಾದ ಯೆಹೋವನ ಜನರನ್ನು ದೂಷಿಸಿ, ಅವರ ಮೇಲೆ ಉಬ್ಬಿಕೊಂಡು ಬಂದುದ್ದರಿಂದ ಅವರ ಅಹಂಕಾರದ ನಿಮಿತ್ತವೇ ಅವರಿಗೆ ಈ ಗತಿಯಾಗುವುದು!


ನಿನ್ನ ಗಾಯವು ಗುಣಹೊಂದದು, ನಿನ್ನ ಗಾಯವು ತೀವ್ರವೇ. ನಿನ್ನ ವಿನಾಶದ ಸುದ್ದಿಯನ್ನು ಕೇಳಿದವರೆಲ್ಲರೂ ನಿನಗೆ ಚಪ್ಪಾಳೆ ಹಾಕಿ ನಗುತ್ತಾರೆ; ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರೂ ಇಲ್ಲ.


ದೇವರಾದ ಯೆಹೋವನಾದ ಕರ್ತನು ಹೀಗೆ ನುಡಿಯುತ್ತಾನೆ, ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ, ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋಮಿನವರೆಲ್ಲರನ್ನೂ, ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದ ಬೆಂಕಿಯಿಂದ ಉರಿಯುತ್ತಾ ಶಪಿಸಿದ್ದೇನೆ.’


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಫಿಲಿಷ್ಟಿಯರು ಯೆಹೂದಕ್ಕೆ ಪ್ರತಿಕಾರಮಾಡಿದ್ದಾರೆ; ಹೌದು, ಮುಯ್ಯಿಗೆಮುಯ್ಯಿ ತೀರಿಸುತ್ತಾ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ.”


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆಹೊಡೆದು ನೆಲವನ್ನು ಒದ್ದು ಹೀಗೆ ಹೇಳು, ‘ಆಹಾ, ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.


ಜನರು ಅವನನ್ನು ನೋಡಿ ಚಪ್ಪಾಳೆಹೊಡೆದು ಛೀಮಾರಿ ಹಾಕಿ, ಆಚೆಗೆ ಹೊರಡಿಸುವರು.”


ಈ ನಿನವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು ತನ್ನ ಹೃದಯದೊಳಗೆ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಅಂದುಕೊಳ್ಳುತ್ತಿತ್ತು; ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಕೊಟ್ಟಿಗೆಯ ಬೀಡಾಗಿದೆ! ಅದರ ಮುಂದೆ ಹಾದುಹೋಗುವವರೆಲ್ಲರು ಸಿಳ್ಳು ಹಾಕಿ ಅಪಹಾಸ್ಯ ಮಾಡುತ್ತಾರೆ.


ಇಸ್ರಾಯೇಲರ ಸ್ವತ್ತಿನ ನಾಶಕ್ಕೆ ನೀನು ಹೇಗೆ ಸಂತೋಷಪಟ್ಟೆಯೋ ಹಾಗೆಯೇ, ನಿನ್ನ ನಾಶಕ್ಕೆ ಲೋಕವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೇಯೀರ್ ಬೆಟ್ಟವೇ, ನೀನು ಹಾಳಾಗುವಿ; ಹೌದು, ಎದೋಮ್ ಸೀಮೆಯೆಲ್ಲಾ ಸಂಪೂರ್ಣವಾಗಿ ಹಾಳಾಗುವುದು, ಆಗ ನಾನೇ ಯೆಹೋವನು ಎಂದು ನಿಮಗೆ ತಿಳಿಯುವುದು.”


ಹಾದುಹೋಗುವವರೆಲ್ಲರೂ ನಿನ್ನನ್ನು ನೋಡಿ ಚಪ್ಪಾಳೆಹೊಡೆಯುತ್ತಾರೆ, ಯೆರೂಸಲೇಮ್ ನಗರಿಯನ್ನು ಕಂಡು, “ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕ ಸಂತೋಷಿಣಿ ಎನ್ನಿಸಿಕೊಳ್ಳುತ್ತಿದ್ದ ಪುರಿಯು ಇದೇ ಏನು? ಛೀ ಛೀ” ಎಂದು ತಲೆಯಾಡಿಸುತ್ತಾರೆ.


ಇಸ್ರಾಯೇಲೇ ನಿನಗೆ ಗೇಲಿಯಾಯಿತಷ್ಟೆ. ಅದು ಕಳ್ಳರ ಗುಂಪಿನಲ್ಲಿ ಸೇರಿದ್ದಾಗಿ ಹಿಡಿಯಲ್ಪಟ್ಟಿತೋ? ನೀನು ಇಸ್ರಾಯೇಲಿನ ಪ್ರಸ್ತಾಪ ಎತ್ತುವಾಗೆಲ್ಲಾ ತಲೆಯಾಡಿಸುತ್ತೀಯಲ್ಲವೆ?


ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.


ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.


‘ಕರ್ತನಾದ ಯೆಹೋವನ ಮಾತನ್ನು ಕೇಳು’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದನ್ನು, ಯೆಹೂದ ವಂಶದವರು ಸೆರೆಹೋದದ್ದನ್ನು ನೀನು ನೋಡಿ, “ಅಹಾ!” ಎಂದು ಹಿಗ್ಗಿಕೊಂಡೆ.


ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ವೈಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ. ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು