ಯೆಹೆಜ್ಕೇಲನು 23:29 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅವರು ನಿನ್ನಲ್ಲಿ ಹಗೆ ತೀರಿಸಿಕೊಂಡು, ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬರಿದುಮಾಡಿ ಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ವ್ಯಭಿಚಾರವು, ಹೌದು, ನಿನ್ನ ದುಷ್ಕರ್ಮವು ಮತ್ತು ವ್ಯಭಿಚಾರವೂ ಬಯಲಿಗೆ ಬರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಅವರ ಕೈಗೆ ನಿನ್ನನ್ನು ನಾನು ಒಪ್ಪಿಸುವೆನು. ಅವರು ನಿನ್ನಲ್ಲಿ ಹಗೆ ತೀರಿಸಿಕೊಳ್ಳುವರು. ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬಟ್ಟಬರಿದುಮಾಡಿ ಬಿಟ್ಟುಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ಹಾದರವು, ಹೌದು, ನಿನ್ನ ಲಂಪಟತನ ಹಾಗು ಸೂಳೆತನ ಬಯಲಿಗೆ ಬರುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಅವರು ನಿನ್ನಲ್ಲಿ ಹಗೆ ತೀರಿಸಿಕೊಂಡು ನೀನು ದುಡಿದದ್ದನ್ನೆಲ್ಲಾ ಅಪಹರಿಸಿ ನಿನ್ನನ್ನು ಬಟ್ಟಬರಿದುಮಾಡಿ ಬಿಟ್ಟುಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ಸೂಳೆತನವು, ಹೌದು ನಿನ್ನ ಪುಂಡಾಟವೂ ಸೂಳೆತನವೂ ಬೈಲಿಗೆ ಬರುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಆಗ ಅವರು ನಿನ್ನನ್ನು ಎಷ್ಟು ದ್ವೇಷಿಸುವರೆಂದು ನಿನಗೆ ತೋರಿಸುವರು. ನೀನು ದುಡಿದವುಗಳನ್ನೆಲ್ಲ ಅವರು ಕಿತ್ತುಕೊಳ್ಳುವರು. ನಿನ್ನನ್ನು ಬೆತ್ತಲೆಮಾಡಿ ಬಿಟ್ಟುಬಿಡುವರು. ಜನರು ನಿನ್ನ ಪಾಪಗಳನ್ನು ಪರಿಪೂರ್ಣವಾಗಿ ನೋಡುವರು. ನೀನು ಸೂಳೆಯಂತೆ ವರ್ತಿಸಿದ್ದನ್ನು ಅವರು ನೋಡುವರು. ನಿನ್ನ ನೀಚತನವೂ ನಿನ್ನ ಸೂಳೆತನವೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಅವರು ನಿನ್ನ ವಿಷಯದಲ್ಲಿ ಹಗೆತೀರಿಸಿಕೊಳ್ಳುವರು. ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವುದು. ಅಧ್ಯಾಯವನ್ನು ನೋಡಿ |