ಯೆಹೆಜ್ಕೇಲನು 21:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಸಂಹರಿಸುವಂತೆ ಸಾಣೆ ಹಿಡಿದಿದೆ, ಮಿಂಚುವಂತೆ ಮಸೆದಿದೆ; ನಮ್ಮ ಕುಮಾರನ ರಾಜದಂಡವು ಉಳಿದ ಎಲ್ಲಾ ದಂಡಗಳನ್ನು ತಿರಸ್ಕರಿಸುತ್ತದಲ್ಲಾ ಎಂಬುದಾಗಿ ನಾವು ಸಂಭ್ರಮಪಡಬಹುದೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ! ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ ಮಿಂಚುವಂತೆ. ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ ರಾಜದಂಡ’ ಎಂದು? ಮಿಕ್ಕ ದಂಡಗಳನ್ನೆಲ್ಲ ಧಿಕ್ಕರಿಸುವಂಥ ದಂಡವೆಂದುಕೊಂಡು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಸಂಹರಿಸುವಂತೆ ಸಾಣೆಹಿಡಿದಿದೆ, ವಿುಂಚುವಂತೆ ತಿಕ್ಕಿದೆ. ನಮ್ಮ ಕುಮಾರನ ರಾಜದಂಡವು ವಿುಕ್ಕ ಎಲ್ಲಾ ದಂಡಗಳನ್ನು ತಿರಸ್ಕರಿಸುತ್ತದಲ್ಲಾ ಎಂಬದಾಗಿ ನಾವು ಸಂಭ್ರಮಪಡಬಹುದೇ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಕೊಲ್ಲುವದಕ್ಕಾಗಿ ಆ ಖಡ್ಗವು ಹರಿತಮಾಡಲ್ಪಟ್ಟಿದೆ, ಮಿಂಚಿನಂತೆ ಹೊಳೆಯುತ್ತಿದೆ. ನನ್ನ ಮಗನೇ, ನಾನು ನಿನ್ನನ್ನು ಶಿಕ್ಷಿಸುತ್ತಿದ್ದ ಬೆತ್ತದಿಂದ ನೀನು ಓಡಿಹೋದೆ. ಬೆತ್ತದ ಶಿಕ್ಷೆಯನ್ನು ಅನುಭವಿಸಲು ನೀನು ಒಪ್ಪಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಸಂಹರಿಸಲು ಸಾಣೆಹಿಡಿದಿದೆ; ಮಿಂಚುವಂತೆ ಮಸೆಯಲಾಗಿದೆ. “ ‘ಹಾಗಾದರೆ ನನ್ನ ಮಗ ಯೆಹೂದದ ರಾಜದಂಡದಲ್ಲಿ ನಾವು ಸಂತೋಷ ಪಡಬಹುದೋ? ಅಂಥ ಪ್ರತಿಯೊಂದು ಬೆತ್ತವನ್ನೂ ಖಡ್ಗವು ತಿರಸ್ಕರಿಸುತ್ತದೆ. ಅಧ್ಯಾಯವನ್ನು ನೋಡಿ |