Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 13:7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಾನು ಮಾತನಾಡದೆ ಹೋದರೂ, ‘ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಾನು ಮಾತಾಡದೆ ಇದ್ದರೂ ‘ಸರ್ವೇಶ್ವರ ಇಂತೆನ್ನುತ್ತಾರೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಭವಿಷ್ಯ ಸುಳ್ಳು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಾನು ಮಾತಾಡದೆಹೋದರೂ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ವಿುಥ್ಯ, ನೀವು ಹೇಳಿದ ಕಣಿಯು ಸುಳ್ಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “‘ಎಲೈ ಸುಳ್ಳುಪ್ರವಾದಿಗಳೇ, ನೀವು ನೋಡಿದ ದರ್ಶನಗಳು ಸತ್ಯವಾದವುಗಳಲ್ಲ. ನೀವು ಮಂತ್ರತಂತ್ರ ಮಾಡಿ ಇಂತಿಂಥದ್ದು ಸಂಭವಿಸುವುದು ಎಂದು ಸುಳ್ಳು ಹೇಳಿದ್ದೀರಿ. ನಾನು ಮಾತಾಡಿಲ್ಲದಿದ್ದರೂ ಯೆಹೋವನೇ ಇದನ್ನು ಹೇಳಿದನೆಂದು ನೀವು ಹೇಳುತ್ತೀರಿ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನಾನು ಮಾತಾಡದೇ ಇದ್ದರೂ, “ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 13:7
7 ತಿಳಿವುಗಳ ಹೋಲಿಕೆ  

ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.


ಇವರು ದಿವ್ಯದರ್ಶಿಗಳಿಗೆ, “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ, ಮತ್ತು ಪ್ರವಾದಿಗಳಿಗೆ, “ನಮಗಾಗಿ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮೋಸವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.


ಅಲ್ಲಿನ ಸುಳ್ಳು ಪ್ರವಾದಿಗಳು ಇವರಿಗಾಗಿ ವ್ಯರ್ಥ ದರ್ಶನವನ್ನೂ, ಸುಳ್ಳು ಕಣಿಯನ್ನೂ ಕಂಡು ಯೆಹೋವನು ಅವರೊಂದಿಗೆ ಮಾತನಾಡದಿದ್ದರೂ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಾ ಮೇಲೆ ಸುಣ್ಣ ಹಚ್ಚುತ್ತಾರೆ.


ನಾನು ಸೂಕ್ಷ್ಮವಾಗಿ ವಿಚಾರ ಮಾಡಿದಾಗ ನನ್ನ ವಿಷಯವಾಗಿ ಆ ಕಾಲ, ಜ್ಞಾನ, ವಚನವನ್ನು ಉಚ್ಚರಿಸುವುದಕ್ಕೂ ಪ್ರವಾದನೆ ನುಡಿಯುವುದಕ್ಕೂ ಇವನನ್ನು ಪ್ರೇರೇಪಿಸಿದವನು ದೇವರಲ್ಲ, ಟೋಬೀಯನೂ, ಸನ್ಬಲ್ಲಟನೂ ಇವನಿಗೆ ಲಂಚ ಕೊಟ್ಟು ಹಾಗೆ ಹೇಳಿದ್ದಾರೆ ಎಂದು ನನಗೆ ಗೊತ್ತಾಯಿತು.


ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು, ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ. ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು