ಯೆಹೆಜ್ಕೇಲನು 1:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಅವುಗಳ ಮುಖಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖವು ಮನುಷ್ಯನ ಮುಖದಂತಿತ್ತು, ಬಲಗಡೆಯ ಮುಖವು ಸಿಂಹದ ಮುಖದಂತಿತ್ತು, ಎಡಗಡೆಯ ಮುಖವು ಹೋರಿಯ ಮುಖದಂತಿತ್ತು, ಹಿಂದಿನ ಮುಖವು ಗರುಡಪಕ್ಷಿಯ ಮುಖದಂತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಅವುಗಳ ಮುಖ ಲಕ್ಷಣಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖ ಮನುಷ್ಯ ಮುಖದಂತಿತ್ತು; ಬಲಗಡೆಯ ಮುಖ ಸಿಂಹನಂತಿತ್ತು; ಎಡಗಡೆಯ ಮುಖ ಹೋರಿಯ ಮುಖದಂತಿತ್ತು; ಹಿಂದಿನ ಮುಖ ಗರುಡ ಪಕ್ಷಿಯ ಮುಖದಂತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಮುಖಗಳು ಎಂಥವುಗಳಂದರೆ ಒಂದೊಂದರ [ಮುಂದಿನ] ಮುಖವು ಮನುಷ್ಯನದು, ಬಲಗಡೆಯ ಮುಖವು ಸಿಂಹನದು, ಎಡಗಡೆಯ ಮುಖವು ಹೋರಿಯದು, [ಹಿಂದಿನ] ಮುಖವು ಗರುಡಪಕ್ಷಿಯದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಅವುಗಳ ಮುಖಗಳು ಹೀಗಿದ್ದವು: ಪ್ರತಿಯೊಂದರ ಮುಂದಿನ ನಾಲ್ಕು ಮುಖಗಳು ಮನುಷ್ಯನ ಮುಖದಂತಿತ್ತು; ಬಲಗಡೆಯ ನಾಲ್ಕು ಮುಖಗಳು ಸಿಂಹದ ಮುಖದಂತಿತ್ತು; ಎಡಗಡೆಯ ನಾಲ್ಕು ಮುಖಗಳು ಹೋರಿಯ ಮುಖದಂತಿತ್ತು; ಹಿಂದಿನ ನಾಲ್ಕು ಮುಖಗಳು ಗರುಡಪಕ್ಷಿಯ ಮುಖದಂತಿತ್ತು. ಅಧ್ಯಾಯವನ್ನು ನೋಡಿ |