ಯೆಶಾಯ 60:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ತುಂಬಿರುವುವು ನಿನ್ನೊಳು ಒಂಟೆಗಳ ಗುಂಪುಗಳು ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಉಷ್ಟ್ರಸಮೂಹವೂ ವಿುದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಆ ಸ್ವಾರ್ಥವಾಹರೆಲ್ಲಾ ಕನಕವನ್ನೂ ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಮಿದ್ಯಾನಿನ ಮತ್ತು ಏಫದ ಒಂಟೆಗಳ ಹಿಂಡು ರಾಜ್ಯವನ್ನು ದಾಟುವವು. ಶೆಬ ರಾಜ್ಯದ ಒಂಟೆಗಳ ಸಾಲು ಚಿನ್ನ ಮತ್ತು ಧೂಪವನ್ನು ಹೊತ್ತುಕೊಂಡು ನಿನ್ನ ಬಳಿಗೆ ಬರುವವು. ಜನರು ಯೆಹೋವನಿಗೆ ಸ್ತೋತ್ರಗಾನ ಹಾಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಒಂಟೆಗಳ ಸಮೂಹವು ನಿನ್ನ ದೇಶದಲ್ಲಿ ತುಂಬಿಕೊಳ್ಳುವುದು. ಮಿದ್ಯಾನಿನ ಏಫಾದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೆಬದಿಂದಲೂ ಬರುವುವು. ಬಂಗಾರವನ್ನೂ, ಧೂಪವನ್ನೂ ತರುವುವು. ಯೆಹೋವ ದೇವರ ಸ್ತೋತ್ರಗಳನ್ನು ಸಾರುವುವು. ಅಧ್ಯಾಯವನ್ನು ನೋಡಿ |