ಯೆಶಾಯ 57:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲವನ್ನೂ ತೆಗೆದುಕೊಂಡು, ಪರರಾಜನ ಬಳಿಗೆ ಪ್ರಯಾಣಮಾಡಿದ್ದಿ; ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದಿ; ನಿನ್ನನ್ನು ಪಾತಾಳದವರೆಗೂ ತಗ್ಗಿಸಿಕೊಂಡಿದ್ದಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಬೇಕಾದಷ್ಟು ಪರಿಮಳ ದ್ರವ್ಯವನ್ನು ಕೂಡಿಸಿಕೊಂಡು, ಸುಗಂಧ ತೈಲವನ್ನು ತೆಗೆದುಕೊಂಡು ‘ಮೋಲೆಕ್’ ದೇವತೆಯ ಬಳಿಗೆ ಯಾತ್ರೆಗೈದಿರುವೆ. (ಹೊಸ ದೇವತೆಗಳನ್ನು ಹುಡುಕಲು) ನಿನ್ನ ದೂತರನ್ನು ದೂರದೂರ ನಾಡುಗಳಿಗೆ ಕಳಿಸಿರುವೆ. ಪಾತಾಳದವರೆಗೂ ನಿನ್ನನ್ನು ತಗ್ಗಿಸಿಕೊಂಡಿರುವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ ತೈಲವನ್ನೂ ತೆಗೆದುಕೊಂಡು ಪರರಾಜನ ಬಳಿಗೆ ಪ್ರಯಾಣಮಾಡಿದ್ದೀ; ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದೀ. ನಿನ್ನನ್ನು ಪಾತಾಳದವರೆಗೂ ತಗ್ಗಿಸಿಕೊಂಡಿದ್ದೀ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಮೋಲೆಕನಿಗೆ ಅಂದವಾಗಿ ತೋರುವಂತೆ ನೀವು ನಿಮಗೆ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಹೋಗುವಿರಿ. ನಿಮ್ಮ ದೂತರನ್ನು ದೂರದೇಶಕ್ಕೆ ಕಳುಹಿಸುತ್ತೀರಿ. ಇವೇ ನಿಮ್ಮನ್ನು ನರಕಕ್ಕೆ ನಡಿಸುತ್ತವೆ. ಅಲ್ಲಿ ಮರಣವಿರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ. ಅಧ್ಯಾಯವನ್ನು ನೋಡಿ |