Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 51:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಂಡು, ಬಲವನ್ನು ತಂದುಕೋ! ಪೂರ್ವಕಾಲದಲ್ಲಿ, ತಲಾಂತರಗಳಲ್ಲಿ, ಎಚ್ಚರಗೊಂಡಂತೆ ಈಗಲೂ ಎಚ್ಚೆತ್ತುಕೋ, ರಹಬನ್ನು ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟವನು ನೀನಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಬಲವನ್ನು ತಂದುಕೋ! ಪೂರ್ವಕಾಲದಲ್ಲಿ, ಪುರಾತನದ ತಲಾಂತರಗಳಲ್ಲಿ, ಎಚ್ಚರಪಟ್ಟಂತೆ ಈಗಲೂ ಎಚ್ಚತ್ತುಕೋ, ರಹಬನ್ನು ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟ ತೋಳು ನೀನಲ್ಲವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು, ಬಲವನ್ನು ಹೊಂದಿಕೊ! ಪುರಾತನ ಕಾಲದಲ್ಲಿ ಮಾಡಿದಂತೆಯೇ ನಿನ್ನ ಶಕ್ತಿಯನ್ನು ತೋರು. ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ. ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೆಹೋವ ದೇವರ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು ಬಲವನ್ನು ಧರಿಸಿಕೋ. ಹಿಂದಿನ ಜನಾಂಗಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 51:9
40 ತಿಳಿವುಗಳ ಹೋಲಿಕೆ  

ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ ಪರಿಶುದ್ಧ ಪಟ್ಟಣವೇ, ನಿನ್ನ ಸುಂದರವಾದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ, ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡುವುದಿಲ್ಲ.


ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ, ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು.


ರಹಬನ್ನು ಛೇದಿಸಿ ಸಾಯಿಸಿದವನು ನೀನು; ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ.


ಐಗುಪ್ತದ ಸಹಾಯವು ವ್ಯರ್ಥ ನಿರರ್ಥಕ; ಆದುದರಿಂದ ನಾನು ಅದಕ್ಕೆ ಸುಮ್ಮನೆ ಬಿದ್ದಿರುವ ಜಂಬದ ಮೃಗವೆಂದು ಹೆಸರಿಟ್ಟಿದ್ದೇನೆ.


“ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದ ಅರಸನಾದ ಫರೋಹನೇ, ನಿನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು, ‘ಈ ನದಿ ನನ್ನದೇ, ನನಗಾಗಿಯೇ ಅದನ್ನು ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಳ್ಳುವ ದೊಡ್ಡ ಮೊಸಳೆಯೇ, ಇಗೋ, ನಾನು ನಿನ್ನ ವಿರುದ್ಧವಾಗಿದ್ದೇನೆ.


ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ, ಎಚ್ಚೆತ್ತುಕೋ, ಎಚ್ಚೆತ್ತುಕೋ, ಎದ್ದುನಿಲ್ಲು! ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದುಬಿಟ್ಟಿದ್ದಿ.


ದೇವರೇ, ಪೂರ್ವಕಾಲದಲ್ಲಿ ನಮ್ಮ ಪೂರ್ವಿಕರ ದಿನದಲ್ಲಿ, ನೀನು ನಡೆಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು.


ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.


ಯೆಹೋವನೇ, ನ್ಯಾಯಸ್ಥಾಪಕನೇ, ನನಗೋಸ್ಕರ ಎಚ್ಚರವಾಗು. ಮಹಾಕೋಪದಿಂದ ಎದ್ದುಬಂದು ನನ್ನ ವಿರೋಧಿಗಳ ಕ್ರೋಧವನ್ನು ಭಂಗಪಡಿಸು.


ನಿನ್ನ ಅಭಿಷಿಕ್ತನಿಗಾಗಿಯೂ ಮತ್ತು ನಿನ್ನ ಪ್ರಜೆಯ ರಕ್ಷಣೆಗಾಗಿಯೂ ನೀನು ಯಾವಾಗಲೂ ಮುಂದಾಗಿರುತ್ತಿ; ದುಷ್ಟರ ಮನೆಯ ಮುಖ್ಯಸ್ಥರನ್ನು ಸದೆಬಡೆದು ಅವರ ಕುಟುಂಬಗಳನ್ನು ಬುಡಸಮೇತವಾಗಿ ಜನರ ಮುಂದೆ ಬೆತ್ತಲೆಯಾಗಿ ಮಾಡುವಿ. ಸೆಲಾ.


ಯೆಹೋವನು ತನ್ನ ಬಲಗೈಯ ಮೇಲೆಯೂ, ತನ್ನ ಭುಜಬಲದ ಮೇಲೆಯೂ ಆಣೆಯಿಟ್ಟು, “ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡುವುದೇ ಇಲ್ಲ. ನೀನು ಶ್ರಮಿಸಿ ಪಡೆದು ದ್ರಾಕ್ಷಾರಸವನ್ನು ಅನ್ಯರು ಕುಡಿಯುವುದೇ ಇಲ್ಲ;


ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಆತನು ಮಹಿಮಾ ವಸ್ತ್ರವನ್ನು ಧರಿಸಿದ್ದಾನೆ, ಶೌರ್ಯವನ್ನು ನಡುಕಟ್ಟನ್ನಾಗಿ ಬಿಗಿದಿದ್ದಾನೆ; ಹೌದು, ಭೂಲೋಕವು ಸ್ಥಿರವಾಗಿರುವುದು ಅದು ಕದಲುವುದಿಲ್ಲ.


“ರಹಬ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು” ಎಂಬುದೇ.


ಕರ್ತನೇ, ಏಕೆ ನಿದ್ರಿಸುತ್ತೀ? ಎಚ್ಚರವಾಗು; ಏಳು, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡ.


ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.


“ಕರ್ತನೇ, ಸರ್ವಶಕ್ತನಾದ ದೇವರೇ, ಇರುವಾತನೇ ಇದ್ದಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.


ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ.


‘ಮರದ ವಿಗ್ರಹಗಳಿಗೆ ಎಚ್ಚೆತ್ತುಕೋ,’ ಜಡವಾದ ಕಲ್ಲಿನ ವಿಗ್ರಹಗಳಿಗೆ, ‘ಎದ್ದೇಳು’ ಎಂದು ಅಪ್ಪಣೆಕೊಡುವವನು ಬುದ್ಧಿಹೀನನು. ಇಂಥ ಬೊಂಬೆಯು ಬೋಧಿಸೀತೇ? ಇಗೋ, ಆ ವಿಗ್ರಹಗಳಿಗೆ ಬೆಳ್ಳಿಬಂಗಾರವನ್ನು ಹೊದಿಸಿದ್ದಾರೆ ಆದರೂ ಅದರೊಳಗೆ ಜೀವವೇ ಇಲ್ಲ.


ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು?


ನನ್ನ ರಕ್ಷಣಾಧರ್ಮದ ಕಾರ್ಯವು ಸಮೀಪಿಸಿದೆ, ನನ್ನ ವಿಮೋಚನಕ್ರಿಯೆಯು ತಲೆದೋರಿದೆ, ನನ್ನ ಹಸ್ತವು ಜನಾಂಗಗಳಿಗೆ ನ್ಯಾಯತೀರಿಸುವುದು, ದ್ವೀಪನಿವಾಸಿಗಳು ನನ್ನನ್ನು ನಿರೀಕ್ಷಿಸಿಕೊಂಡು ನನ್ನ ಹಸ್ತಕಾರ್ಯಕ್ಕೆ ಕಾದಿರುವರು.


ಆ ವರೆಗೆ ನಿದ್ರಿಸುವವನಂತೆಯೂ, ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚೆತ್ತು,


ಯೆಹೋವನೇ, ಪರಾಕ್ರಮದಿಂದ ನಿನ್ನನ್ನು ಘನಪಡಿಸಿಕೋ; ನಾವು ಗಾಯನಮಾಡುತ್ತಾ ನಿನ್ನ ಶೂರತ್ವವನ್ನು ಕೊಂಡಾಡುವೆವು.


ಆಗ ಗಿದ್ಯೋನನು ಅವನಿಗೆ “ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು? ನಮ್ಮ ಹಿರಿಯರು, ಯೆಹೋವನು ಅದ್ಭುತಗಳನ್ನು ನಡಿಸಿ ತಮ್ಮನ್ನು ಐಗುಪ್ತದಿಂದ ಬಿಡಿಸಿದನೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಆತನು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾನಲ್ಲಾ” ಅಂದನು.


ಬೇರೆ ಯಾವ ದೇವರೂ ಮನಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಮಹಾಭೀತಿ ಇವುಗಳನ್ನು ಪ್ರಯೋಗಿಸಿ, ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯೊಳಗಿಂದ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದಾನೇ? ನಿಮ್ಮ ದೇವರಾದ ಯೆಹೋವನಾದರೋ ಐಗುಪ್ತದೇಶದಲ್ಲಿ ನಿಮಗೋಸ್ಕರ ಇದನ್ನೆಲ್ಲಾ ನಿಮ್ಮ ಕಣ್ಣು ಮುಂದೆ ನಡಿಸಿದ್ದಾನಲ್ಲಾ.


ಇದರಿಂದ, ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು, ಅದೇನೆಂದರೆ, “ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು? ಕರ್ತನ ಭುಜ ಬಲವು ಯಾರಿಗೆ ಗೋಚರವಾಯಿತು?” ಎಂಬುದೇ.


ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಮುತ್ತಿಗೆ ಹಾಕಿ ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.


ಆದುದರಿಂದ, ನೀನು ಇಸ್ರಾಯೇಲರಿಗೆ ನನ್ನ ಹೆಸರಿನಲ್ಲಿ ಹೇಳಬೇಕಾದದ್ದೇನೆಂದರೆ, ‘ನಾನೇ ಯೆಹೋವನು ಐಗುಪ್ತರು ನಿಮ್ಮಿಂದ ಮಾಡಿಸುವ ಬಿಟ್ಟೀ ಕೆಲಸಗಳನ್ನು ತಪ್ಪಿಸಿ, ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ, ನನ್ನ ಕೈಚಾಚಿ ಅವರಿಗೆ ಮಹಾ ಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು.


ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವುದಿಲ್ಲ; ರಾಹಾಬನ ಸಹಾಯಕರು ಆತನಿಗೆ ಅಡ್ಡಬಿದ್ದರಲ್ಲಾ.


ಹಳೆಯ ದಿನಗಳನ್ನೂ, ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು.


ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.


ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ; ನರಮಾನವರೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.


ಅವರು ಕಷ್ಟವೆಂಬ ಕಡಲನ್ನು ದಾಟಿ ಬರುವರು, ಅಲ್ಲಕಲ್ಲೋಲವಾದ ಸಮುದ್ರವನ್ನು ಭೇದಿಸಿಬಿಡುವರು, ನೈಲ್ ನದಿಯೆಲ್ಲಾ ತಳದ ತನಕ ಒಣಗುವುದು. ಅಶ್ಶೂರದ ಗರ್ವವು ತಗ್ಗಿಸಲ್ಪಡುವುದು, ಐಗುಪ್ತದ ರಾಜದಂಡವು ತಪ್ಪಿಹೋಗುವುದು.


ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.


ಏಕೆ ವಿಮುಖನಾಗಿದ್ದಿ? ನಮಗಿರುವ ಬಾಧೆಗಳನ್ನೂ, ಹಿಂಸೆಗಳನ್ನೂ ಏಕೆ ಲಕ್ಷಿಸುವುದಿಲ್ಲ?


ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.


ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು.


ಮತ್ತು ‘ನಿನ್ನ ಸಂತಾನದವರು ದಾಸರಾಗಿ ಸೇವೆಸಲ್ಲಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆ ಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು’ ಎಂಬುದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು