ಯೆಶಾಯ 47:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಇಗೋ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು; ಜ್ಞಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಬೆಂಕಿಯೂ ಅಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಇರುವರವರೆಲ್ಲರು ಒಣಹುಲ್ಲಿನ ಕೂಳೆಯಂತೆ ಸುಟ್ಟುಬಿಡುವುದವರನು ಉರಿಯುವ ಚಿತೆ ತುತ್ತಾಗುವರವರು ಆ ಜ್ವಾಲಾಗ್ನಿಗೆ ತಪ್ಪದೆ. ಅದು ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿಯಂತಲ್ಲ ಮೈಬೆಚ್ಚಗಾಗಿಸಿಕೊಳ್ಳುವ ಉರಿಯಂತಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆಹಾ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವದು, ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಉರಿಯಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಆದರೆ ಆ ಮನುಷ್ಯರಿಗೆ ತಮ್ಮನ್ನೇ ರಕ್ಷಿಸಲು ಅಸಾಧ್ಯವಾಗುವದು. ಅವರು ಹುಲ್ಲಿನಂತೆ ಸುಟ್ಟುಹೋಗುವರು. ರೊಟ್ಟಿಸುಡಲು ಕೆಂಡಗಳು ಕಾಣಿಸದಂತೆಯೂ ಚಳಿ ಕಾಯಿಸಿಕೊಳ್ಳಲು ಬೆಂಕಿ ಇರದಂತೆಯೂ ಅವರು ಕ್ಷಣಕಾಲದಲ್ಲಿ ಸುಟ್ಟುಹೋಗುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಇಗೋ, ಅವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು. ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು ಇಲ್ಲವೆ ಕಾಯಿಸಿಕೊಳ್ಳುವುದಕ್ಕೆ ಕೆಂಡವಿರುವುದಿಲ್ಲ. ಹತ್ತಿರ ಕೂತುಕೊಳ್ಳಲು ಬೆಂಕಿಯೂ ಇಲ್ಲ. ಅಧ್ಯಾಯವನ್ನು ನೋಡಿ |