ಯೆಶಾಯ 44:15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅದು ಸೌದೆಗಾಗುವುದು. ಅದರಿಂದ ಬೆಂಕಿಯನ್ನು ಉರಿಸಿ ಚಳಿಕಾಯಿಸಿಕೊಳ್ಳುವನು. ಅವನು ಬೆಂಕಿಯನ್ನು ಹಚ್ಚಿ ರೊಟ್ಟಿಯನ್ನು ಸುಡುವನು. ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ವಿಗ್ರಹವನ್ನು ಮಾಡಿ ಅದಕ್ಕೆ ಅಡ್ಡಬೀಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಅದರ ಒಂದು ಭಾಗ ಒಲೆಗಾಗುತ್ತದೆ, ಚಳಿ ಕಾಯಿಸಿಕೊಳ್ಳುವುದಕ್ಕೆ ಆಗುತ್ತದೆ, ರೊಟ್ಟಿ ಸುಡುವುದಕ್ಕಾಗುತ್ತದೆ. ಇನ್ನೊಂದು ಭಾಗದಿಂದ ದೇವತೆಯನ್ನು ಮಾಡಿ ಮನುಷ್ಯ ಪೂಜಿಸುತ್ತಾನೆ; ವಿಗ್ರಹ ಕೆತ್ತಿ ಅದಕ್ಕೆ ಅಡ್ಡಬೀಳುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಅದು ಸೌದೆಗಾಗುವದು; ಅವನು ಸ್ವಲ್ಪ ತೆಗೆದು ಕಾಯಿಸಿಕೊಳ್ಳುವನು, ಉರಿಸಿ ರೊಟ್ಟಿಸುಡುವನು; ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ಬೊಂಬೆ ಕೆತ್ತಿ ಅಡ್ಡಬೀಳುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಅವನು ಮರವನ್ನು ಕಡಿದು, ತನ್ನನ್ನು ಬೆಚ್ಚಗೆ ಮಾಡಲು ಅಗ್ಗಿಷ್ಟಿಕೆಗಾಗಿ ಉಪಯೋಗಿಸುತ್ತಾನೆ; ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಆಹಾರವನ್ನು ಬೇಯಿಸುತ್ತಾನೆ; ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾನೆ. ರೊಟ್ಟಿಯನ್ನು ಸುಡುತ್ತಾನೆ; ಉಳಿದ ಮರದ ತುಂಡಿನಿಂದ ಒಂದು ವಿಗ್ರಹವನ್ನು ಕೆತ್ತುತ್ತಾನೆ. ಆ ವಿಗ್ರಹಕ್ಕೆ ದೇವರೆಂದು ಹೇಳುತ್ತಾನೆ; ಆ ದೇವರು ಮನುಷ್ಯನು ತಯಾರಿಸಿದ ವಿಗ್ರಹ. ಆದರೆ ಅವನು ಆ ವಿಗ್ರಹದ ಮುಂದೆ ಅಡ್ಡಬೀಳುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಆಗ ಅದು ಮನುಷ್ಯರು ಉರಿಸುವುದಕ್ಕಾಗುವುದು. ಏಕೆಂದರೆ ಅದರಿಂದ ಚಳಿಕಾಯಿಸಿಕೊಳ್ಳುತ್ತಾನೆ. ಅದನ್ನು ಬೆಂಕಿ ಹಚ್ಚಿ, ರೊಟ್ಟಿಯನ್ನು ಸುಡುತ್ತಾನೆ. ಅವನು ಅದರಿಂದ ಒಂದು ದೇವರನ್ನು ಮಾಡಿ, ಅದಕ್ಕೆ ನಮಸ್ಕರಿಸುತ್ತಾನೆ. ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡ ಬೀಳುವನು. ಅಧ್ಯಾಯವನ್ನು ನೋಡಿ |