ಯೆಶಾಯ 42:25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಆದುದರಿಂದ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ, ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹೊತ್ತಿಕೊಂಡಿತು, ಆದರೆ ಅವರು ತಿಳಿಯಲಿಲ್ಲ. ದಹಿಸಿತು, ಆದರೆ ಅವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಆಗ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹತ್ತಿತು, ಆದರೆ ಅವರು ತಿಳಿಯಲಿಲ್ಲ; ದಹಿಸಿತು, ಲಕ್ಷ್ಯಕ್ಕೆ ತರಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಆದ್ದರಿಂದ ಯೆಹೋವನು ಅವರ ಮೇಲೆ ಕೋಪಗೊಂಡನು. ಅವರಿಗೆ ವಿರುದ್ಧವಾಗಿ ಬಲವಾದ ಯುದ್ಧಗಳು ನಡೆಯುವಂತೆ ಮಾಡಿದನು. ಇಸ್ರೇಲ್ ಜನರ ಸುತ್ತಲೂ ಬೆಂಕಿಯು ಆವರಿಸಿಕೊಂಡಿರುವಂತಿದ್ದರೂ ಅವರಿಗೆ ಅದರ ಪ್ರಜ್ಞೆಯಿರಲಿಲ್ಲ. ಅವರೇ ಉರಿಯುತ್ತಿರುವಂತೆ ಅದಿತ್ತು. ಆದರೆ ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಆದ್ದರಿಂದ ಆತನು ತನ್ನ ಯುದ್ಧದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ, ಅವನಿಗೆ ತಿಳಿಯಲಿಲ್ಲ. ಅದು ಅವನನ್ನು ಸುಟ್ಟರೂ, ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿ |