ಯೆಶಾಯ 40:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ವಿಗ್ರಹವಾದರೋ, ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ವಿಗ್ರಹವಾದರೋ ಎರಕ ಹೊಯ್ಯಲ್ಪಟ್ಟಿತು ಶಿಲ್ಪಿಯಿಂದ ಅದಕ್ಕೆ ಬಡಿದಿರುವ ಚಿನ್ನದ ಕವಚ ಅಕ್ಕಸಾಲಿಗನಿಂದ ಅದಕ್ಕೆ ತೊಡಿಸಿರುವ ಬೆಳ್ಳಿಸರಪಣಿ ಆ ವಾಜನಿಂದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ವಿಗ್ರಹವಾದರೋ ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಬಡಿದು ಬೆಳ್ಳಿಯ ಸರಪಣಿಗಳನ್ನು ಮಾಡುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಇಲ್ಲ, ಆದರೆ ಕೆಲವರು ವಿಗ್ರಹಗಳನ್ನು ಕಲ್ಲಿನಿಂದ ಅಥವಾ ಮರದಿಂದ ತಯಾರಿಸುತ್ತಾರೆ. ಅವುಗಳನ್ನು ಅವರು ದೇವರು ಎಂದು ಕರೆಯುತ್ತಾರೆ. ಒಬ್ಬನು ಒಂದು ವಿಗ್ರಹವನ್ನು ಮಾಡುತ್ತಾನೆ. ಇನ್ನೊಬ್ಬನು ಅದಕ್ಕೆ ಬಂಗಾರದ ತಗಡನ್ನು ಹೊದಿಸುತ್ತಾನೆ ಮತ್ತು ಬೆಳ್ಳಿಹಾರವನ್ನು ಮಾಡಿಹಾಕುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ. ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು. ಅಧ್ಯಾಯವನ್ನು ನೋಡಿ |