ಯೆಶಾಯ 37:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅಸ್ಸೀರಿಯದ ಅರಸನಿಂದ ಬಂದಿರುವ ಸೇನಾಪತಿ ಆಡಿದ ಮಾತುಗಳನ್ನು ನಿನ್ನ ದೇವರಾದ ಸರ್ವೇಶ್ವರ ಕೇಳಿದ್ದಾರೆ. ಆ ಸೇನಾಪತಿ ತನ್ನ ಒಡೆಯನ ಹೆಸರಿನಲ್ಲಿ ಜೀವಸ್ವರೂಪರಾದ ಆ ದೇವರನ್ನು ದೂಷಿಸಿದ್ದಾನೆ. ಅವನಿಗೆ ತಕ್ಕ ದಂಡನೆಯಾಗಬೇಕು. ಹೀಗಿರಲು ಅಳಿದುಳಿದಿರುವ ಜನರಿಗಾಗಿ ದೇವರನ್ನು ನೀನು ಪ್ರಾರ್ಥನೆ ಮಾಡಬೇಕೆಂದು ಹಿಜ್ಕೀಯ ಕೇಳಿಕೊಂಡಿದ್ದಾನೆ,’ ಎಂದು ತಿಳಿಸಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಆತನನ್ನು ಪ್ರಾರ್ಥಿಸು ಎಂಬದಾಗಿ ಹಿಜ್ಕೀಯನು ಅನ್ನುತ್ತಾನೆ ಎಂದು ಹೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಅಶ್ಶೂರದ ಅರಸನು ತನ್ನ ಸೇನಾದಂಡನಾಯಕನು ನಮ್ಮ ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟಮಾತುಗಳನ್ನು ಹೇಳಲು ಕಳುಹಿಸಿರುತ್ತಾನೆ. ನಿನ್ನ ದೇವರಾದ ಯೆಹೋವನು ಇದನ್ನೆಲ್ಲಾ ಕೇಳಿರುವನು. ವೈರಿಗಳು ನುಡಿದ ಆ ಮಾತುಗಳು ಸತ್ಯವಾದವುಗಳಲ್ಲ ಎಂಬುದನ್ನು ಆತನು ತೋರಿಸುವನು. ಆದ್ದರಿಂದ ಇನ್ನೂ ಜೀವದಿಂದ ಉಳಿದಿರುವವರಿಗಾಗಿ ಪ್ರಾರ್ಥಿಸು” ಎಂದು ಹಿಜ್ಕೀಯನು ಹೇಳಿದ್ದಾನೆ ಅಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು, ಎಂಬುದಾಗಿ ಹಿಜ್ಕೀಯನು ಅನ್ನುತ್ತಾನೆ,” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |
ಜೀವಸ್ವರೂಪನಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನನಾದ ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದನೆಯ ಮಾತುಗಳನ್ನು, ನಿನ್ನ ದೇವರಾದ ಯೆಹೋವನು ಕೇಳಿರುವನು. ನಿನ್ನ ದೇವರಾದ ಯೆಹೋವನು ತಾನು ಹೇಳಿದ ಮಾತುಗಳ ನಿಮಿತ್ತ ಮುಯ್ಯಿತೀರಿಸುವನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗಾಗಿಯಾದರೂ ಆತನನ್ನು ಪ್ರಾರ್ಥಿಸು ಎಂಬುದಾಗಿ ಹಿಜ್ಕೀಯನು ಹೇಳುತ್ತಾನೆ” ಎಂದು ಹೇಳಿರಿ ಅಂದನು.
ಹೀಗಿರಲು ಯೆಹೋವನು ಆ ದಿನದಂದು ಸೂಚಿಸಿದಂತೆ ಈ ಪರ್ವತ ಪ್ರದೇಶವನ್ನು ನನಗೆ ಕೊಡು ಇದರಲ್ಲಿ ಉನ್ನತ ಪುರುಷರು (ಅನಾಕ್ಯರು) ಇರುತ್ತಾರೆ ಎಂದು ಈ ಪಟ್ಟಣಗಳು ದೊಡ್ಡದೂ, ಕೋಟೆಕೊತ್ತಲುಳ್ಳವುಗಳೂ ಆಗಿವೆ ಎಂದೂ ಆ ಕಾಲದಲ್ಲಿ ನೀನೇ ಕೇಳಿದ್ದೀಯಲ್ಲಾ. ಅವರೆಲ್ಲರನ್ನು ಓಡಿಸಿಬಿಡುವುದಕ್ಕೋಸ್ಕರ ಯೆಹೋವನು ತನ್ನ ಮಾತಿಗನುಸಾರವಾಗಿ ನನಗೆ ಸಹಾಯ ಮಾಡುವನೆಂದು ನಂಬಿಕೊಂಡಿದ್ದೇನೆ” ಅಂದನು.
ಯೆಹೂದದ ಅರಸನಾದ ಹಿಜ್ಕೀಯನೂ ಎಲ್ಲಾ ಯೆಹೂದ್ಯರೂ ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಆ ಅರಸನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ದಯೆಯನ್ನು ಬೇಡಿಕೊಳ್ಳಲು ಯೆಹೋವನು ಅವರ ವಿಷಯವಾಗಿ ನುಡಿದಿದ್ದ ಕೇಡನ್ನು ಮನಮರುಗಿ ಮಾಡದೆ ಬಿಟ್ಟನಲ್ಲಾ. ನಾವಾದರೋ ಇವನನ್ನು ಕೊಂದು ಹಾಕಿ ನಮಗೆ ದೊಡ್ಡ ಕೇಡನ್ನು ಉಂಟು ಮಾಡಿಕೊಳ್ಳುವವರಾಗಿದ್ದೇವೆ” ಎಂಬುದಾಗಿ ಸಕಲಜನ ಸಮೂಹಕ್ಕೆ ಹೇಳಿದರು.
“ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು.