ಯೆಶಾಯ 37:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೀಗೆ ಹೇಳುತ್ತಾನೆ, ‘ಈ ದಿನದಲ್ಲಿ ನಮಗೆ ಮಹಾಕಷ್ಟವೂ, ಶಿಕ್ಷೆಯೂ, ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವುದಕ್ಕೆ ಬಲ ಸಾಲದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅವನಿಗೆ ಹೀಗೆಂದು ಹೇಳಿ : ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ. ಹೆರಿಗೆಯ ಕಾಲ ಬಂದಿದೆ, ಆದರೆ ಹೆರುವುದಕ್ಕೆ ಶಕ್ತಿ ಸಾಲದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅವರು ಅದರಂತೆ ಯೆಶಾಯನ ಬಳಿಯಲ್ಲಿ - ಈ ದಿವಸದಲ್ಲಿ ನಮಗೆ ಮಹಾಕಷ್ಟವೂ ಶಿಕ್ಷೆಯೂ ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವದಕ್ಕೆ ಬಲ ಸಾಲದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಇವರು ಯೆಶಾಯನಿಗೆ, “ಅರಸನಾದ ಹಿಜ್ಕೀಯನು ಈ ದಿವಸವನ್ನು ಶೋಕದ ದಿವಸವನ್ನಾಗಿ ಘೋಷಿಸಿದ್ದಾನೆ. ಇದು ದುಃಖದ ಸಮಯವಾಗಿದೆ. ಇದು ದಿನತುಂಬಿ ತಾಯಿಯ ಹೊಟ್ಟೆಯೊಳಗಿಂದ ಹೊರಬರಲು ಶಕ್ತವಾಗಿಲ್ಲದ ಕೂಸಿನಂತಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆಗ ಅವರು ಯೆಶಾಯನಿಗೆ, “ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ. ಅಧ್ಯಾಯವನ್ನು ನೋಡಿ |