ಯೆಶಾಯ 34:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಆದರೆ ಕಾಡಿನ ಪಕ್ಷಿಗಳು, ಪ್ರಾಣಿಗಳು ಅಲ್ಲಿ ವಾಸಿಸುವವು. ಗೂಬೆ ಮತ್ತು ಕಾಗೆಗಳು ಅಲ್ಲಿ ವಾಸಿಸುವವು; ಯೆಹೋವನು ಅದರ ಮೇಲೆ ನಾಶ ಎಂಬ ನೂಲನ್ನೂ ಪಾಳು ಎಂಬ ಮಟ್ಟಗೋಲನ್ನೂ ಎಳೆಯುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಅದು ಹದ್ದುಗಳ, ಮುಳ್ಳುಹಂದಿಗಳ ಸ್ವಾಧೀನವಾಗುವುದು. ಕಾಗೆಗೂಗೆಗಳಿಗೆ ಅದು ಗೂಡಾಗುವುದು. ಸರ್ವೇಶ್ವರ ಹಾಳುಪಾಳನ್ನೇ ಅದರ ಅಳತೆಗೋಲನ್ನಾಗಿಯೂ ಅಸ್ತವ್ಯಸ್ತತೆಯನ್ನೇ ಅದರ ಮಟ್ಟಗೋಲನ್ನಾಗಿಯೂ ಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಅದು ಕೊಕ್ಕರೆ ಮುಳ್ಳುಹಂದಿಗಳ ಹಕ್ಕು ಆಗುವದು; ಕಾಗೆಗೂಗೆಗಳು ಅಲ್ಲಿ ವಾಸಿಸುವವು; ಯೆಹೋವನು ಅದರ ಮೇಲೆ ಹಾಳೆಂಬ ನೂಲನ್ನೂ ಪಾಳೆಂಬ ಮಟ್ಟಗೋಲನ್ನೂ ಎಳೆಯುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಪಕ್ಷಿಗಳು ಮತ್ತು ಚಿಕ್ಕಪ್ರಾಣಿಗಳೂ ಅದರಲ್ಲಿ ವಾಸಿಸುವವು. ಗೂಬೆಗಳೂ ಕಾಗೆಗಳೂ ಅಲ್ಲಿ ವಾಸಿಸುವವು. ಅದು “ಬೆಂಗಾಡಿನ ಮರುಭೂಮಿ” ಎಂದು ಕರೆಯಲ್ಪಡುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆದರೆ ಬಕಪಕ್ಷಿಯು ಮತ್ತು ಮುಳ್ಳುಹಂದಿಯು ಅದನ್ನು ಆವರಿಸಿಕೊಳ್ಳುವುವು. ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವುವು. ಗಲಿಬಿಲಿ ಎಂಬ ನೂಲನ್ನು, ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು. ಅಧ್ಯಾಯವನ್ನು ನೋಡಿ |